ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ
ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ ||
ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ
ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೆ || ೧ ||
ಮಕರಕುಂಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿ ತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೆ || ೨ ||
ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೆ ಛತ್ರ ಚಾಮರದಿಂದ
ರಂಗಯ್ಯನ ಉತ್ಸವ ಮೂರುತಿಯ || ೩ ||
ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದ್ದನಲ್ಲೆ ವಾಯು ಬೊಮ್ಮಾದಿಗಳು
ರಂಗಯ್ಯನ ಸೇವೆಯ ಮಾಡುವರೆ || ೪ ||
ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮಂಟಪದಲ್ಲಿ ಸರ್ವಾಭರಣದಿಂದ
ಪುರಂದರವಿಠಲನ ಕೂಡಿದೇನೆ || ೫ ||
Kanasukandene manadalli kalavalagondene
Enu helali tangi timmayyana padavanu kande || pallavi ||
Ponnada kadaganittu timmayya ta
Polva namava ittu anduge Galugennuta
Ena munde bandu nintiddanalle || 1 ||
Makarakundalavanittu timmayya ta
Kasturi tilakavanittu gejje Galugenuta
Svami ta bandu nintiddanalle || 2 ||
Muttina pallakki yatigalu
Hottu nintiddaralle Catra camaradinda
Rangayyana utsava murutiya || 3 ||
Tamara kamaladali krushnayya ta
Bandu nintiddanalle vayu bommadigalu
Rangayyana seveya maduvare || 4 ||
Navaratna kettisida svami enna
Hrudayamantapadalli sarvabaranadinda
Purandaravithalana kudidene || 5 ||
2 thoughts on “Enu helali tangi timmayyana padavanu”