Posted in chakrabja mandala, dasara padagalu, MADHWA

Song on Chakrabja mandala – Uragadhri vittala dasaru

ಸಪ್ತಕೋಟಿ ಮಹಾಮಂತ್ರಾರ್ಥ ಹೃದಯಾಬ್ಜ
ಚಕ್ರಮಂಡಲದೊಳು ಪ್ರತಿಪಾದ್ಯ || ಪ||

ಹೃದಯಾಬ್ಜ ಮಿತ್ರ ಘೃಣೀ ಎಂದು ಸ್ತ್ರೋತ್ರ
ತ್ರಿಕೋಣದೊಳು ಹ್ರೀಂ ಶ್ರೀಂ ಕ್ಲೀಂ ಮಾತ್ರ
ಮುದದಿಂದ ಜ್ಞಾನೇಛ್ಛಾ ಕ್ರಿಯಾ ಶಕ್ತಿ ತ್ರಯಗಳು
ತದಭಿಮಾನಿಗಳ ನೆನೆದುದಳದಿ ಸೂರ್ಯ
ಸೋಮಾಗ್ನಿಗಳ್ಮೇಲೆ ಕರಿ ಅಜ ರಥ ವೀಥಿಗಳಧಕರಿಸಿ
ಅದರ ಮೇಲೊಂದು ಮಂಡಲ ನಿರ್ಮಿಸಿ ಷÀಟ್ಸರೋ-
ಜದಳಗಳನೆ ರಚಿಸಿ ಇದರೋಳು ಪೂರ್ಣ  ಜ್ಞಾನ್ವೆಶ್ವರ್ಯ
ಪ್ರಭಾನಂದ ತೇಜ ಸತ್ಯಮೂರ್ತಿಗಳ್ಚಿಂತಿಸೀ
ವತ್ಸರ ಋತು ಮಾಸ ತಾರಾರಾಶಿಗಳ ಗುಣಿಸಿ
ಬದಿಯಲಿ ಏಕಾ ಪಂಚಾಶದ್ವರ್ಣ ತಿಳಿಯೋದಿದು ವ್ಯಾಪ್ತಿ ||1||

ಮೇಲೊಂದು ಮಂಡಲದ ಅಷ್ಟದಳಗಳಲಿ
ಅಷ್ಟ ಬೀಜಾಕ್ಷರಗಳನೆ ರಚಿಸೀ ಶನಿ ರಾಹು ಗುರು
ಬುಧ ಶುಕ್ರ ಸೋಮ ಮಂಗಳ ಕೇತುಗಳ ನಿರ್ಮಿಸಿ
ವಲಯದಿ ಪ್ರಣವದಷ್ಟಕ್ಷರಗಳ ನಿರ್ಮಿಸಿ
ವಿಶ್ವಾದ್ಯಷ್ಟರೂಪನನೆ ಚಿಂತಿಸಿ ಅದರಿಂದಭಿವ್ಯಕ್ತ
ವರ್ಣಗಳ್‍ಭಜಿಸೀ ವರ್ಗಕೆ ತತ್ವತನ್ಮಾನಿಗಳನೆ ಚಿಂತಿಸಿ
ಅಷ್ಟಾಕ್ಷರಾತ್ಮಕನ ದೃಢಮನಸಿನಿಂದ ಸ್ತುತಿಸಿ
ಕಾಲ ಅಧಿಕಾರಭೇದದಿಂದುಪಾಸನ ಯೋಗ್ಯತೆಯಂತೆ
ಇದು ವ್ಯಾಪ್ತಿ||2||

ಮೇಲೊಂದು ಮಂಡಲ ದ್ವಾದಶದಳದೊಳ್
ದ್ವಾದಶ ಬೀಜಾಕ್ಷರ ಕೇಶವಾದಿ ದ್ವಾದಶನಾಮ
ವರ್ಣವಿಭಾಗವು ರಾಶಿಗಳ ವಿವರ ವಲಯದಿ
ತಾರಾಯೋಗಗಳ್ವಿಸ್ತಾರ ಮೇಲ್ಮಂಡಲದೊಳು
ಚತುರ್ವಿಂಶತಿ ಬೀಜಾಕ್ಷರ ಕೇಶವಾದಿನಾಮ
ತಾರೆರಾಶಿಗಳೆಣಿಸೀ ಮೇಲೆ ಐವತ್ತೊಂದು
ಅಜಾದಿಗಳ ಚಿಂತಿಸಿ ಅಲ್ಲಿಹ ಶ್ರೀ ವೇಂಕಟೇಶಾತ್ಮಕ ಶ್ರೀ ಉರಗಾದ್ರಿವಾಸವಿಠಲ ||3||

Saptakōṭi mahāmantrārtha hr̥dayābja cakramaṇḍaladoḷu pratipādya || pa||

hr̥dayābja mitra ghr̥ṇī endu strōtra trikōṇadoḷu hrīṁ śrīṁ klīṁ mātra mudadinda jñānēchchā kriyā śakti trayagaḷu tadabhimānigaḷa nenedudaḷadi sūrya sōmāgnigaḷmēle kari aja ratha vīthigaḷadhakarisi adara mēlondu maṇḍala nirmisi ṣaÀṭsarō- jadaḷagaḷane racisi idarōḷu pūrṇa jñānveśvarya prabhānanda tēja satyamūrtigaḷcintisī vatsara r̥tu māsa tārārāśigaḷa guṇisi badiyali ēkā pan̄cāśadvarṇa tiḷiyōdidu vyāpti ||1||

mēlondu maṇḍalada aṣṭadaḷagaḷali aṣṭa bījākṣaragaḷane racisī śani rāhu guru budha śukra sōma maṅgaḷa kētugaḷa nirmisi valayadi praṇavadaṣṭakṣaragaḷa nirmisi viśvādyaṣṭarūpanane cintisi adarindabhivyakta varṇagaḷ‍bhajisī vargake tatvatanmānigaḷane cintisi aṣṭākṣarātmakana dr̥ḍhamanasininda stutisi kāla adhikārabhēdadindupāsana yōgyateyante idu vyāpti||2||

mēlondu maṇḍala dvādaśadaḷadoḷ dvādaśa bījākṣara kēśavādi dvādaśanāma varṇavibhāgavu rāśigaḷa vivara valayadi tārāyōgagaḷvistāra mēlmaṇḍaladoḷu caturvinśati bījākṣara kēśavādināma tārerāśigaḷeṇisī mēle aivattondu ajādigaḷa cintisi alliha śrī vēṅkaṭēśātmaka śrī uragādrivāsaviṭhala ||3||

 

Posted in dasara padagalu, MADHWA, purandara dasaru

Madhwa Davala

ಕೇಶವ ನಾರಾಯಣರು ಶೇಷನ ಮೇಲೆ ವರಗಿರಲು ಆಚಾರ ವಡೆಯರಢವಳಾದರು ಪೇಳುವೆನು||
ಕೋಟಿಬ್ರಹ್ಮಾಂಡವಳಗ ದಾಸಮುಖ್ಯ ಪ್ರಾಣನಾಥ ಕೃತಯುಗದಲಿ ವಾಯು ಅವತಾರನಾದಾಗ ||
ತ್ರೇತಾಯುಗದಲಿ ರಘುಪನ ದಾಸನಾಗಿ ಹನುಮಂತ ತಾ ದ್ವಾಪರಯುಗದಲ್ಲಿ ಭೀಮಸೇನನಾಗಿ ಅವತರಿಸಿದನು||
ಕಲಿಯುಗದಲಿ ಮಧ್ವರಾಯರು ಗುರುಮುನಿರಾಯರಾಗಿ ಅವತರಿಸಿ||
ಹರಿ ಪರದೇವತೆ ಎಂಬೋ ಬಿರುದಾವಳೆಯ||
ಆನಂದಮುನಿ ಅವತರಿಸಲು ಜ್ಞಾನಹುಟ್ಟಿತು. ತ್ರಿಭುವಕೆ ವಾಯು ಮೊದಲಾದ ದೇವತೆಗಳು ನಲಿನಲಿದಾಡೆ||
ಬದರಿನಾರಾಯಣ ಅನೀರೂಪದಿಂದ ರಘುನಾಥನ ನಿಜದಾಸ ಬದರಿ,ಕಾಶಿವಾಸ,ದಕ್ಷಿಣಶರಧಿಗೆ ನಂದಾ||
ದಂಡೆತ್ತಲು ಮಧ್ವರಾಯರು ಭುಮಂಡಲವೆಲ್ಲ ಕದಳಿದವು ಕಮಂಡಲ ನೀರು ಗೋವಿಂದನ ಸಂಭ್ರಮದಾರ್ಚನೆಗೆ||
ಒಣಗಿ ಹೋಗೊ ಬಿತ್ ಬೆಳೆಗೆ ಮಳೆಬಂದಾಯಿತು ಹರಿಭಕ್ತಿ ಪ್ರಕಟಿಸಿದರು ಗುರುರಾಯರು||
ಹರಿಭಕ್ತಿಮದಗಿರಿಯ ಸುಜನರ ಚಿಂತಾಮಣಿಯ ಪ್ರಳಯಭೈರವನೆಂಬೊ ಸಂಕರ ಇದುರಿಗೆ ಬಂದಾ||
ಪ್ರಳಯಭೈರವ ಸಂಕರಗ ಹೃದಯ ಸೀಳಿದ ಮೂರು ಜಗಕ ಧರಣಿ ಮೇಲೆ ಮೆರೆದರು ತಾವ್ ಯತಿಯ||
ಮಧ್ವಶಾಸ್ತ್ರದ ಅತಿ ನಿಪುಣಾ ಪದ್ಮನಾಭನು ಡಿಂಗರೀಯೇ ಬಿರುದಿನ ಚಿಂತಾಮಣಿ ಗುರುರಾಯರು ಹೊರಗಹೊರಟರು ಬೇಗ||
ದಾಸರ ಮೇಲೆ ಕೃಪೆಯಿಂದ ವಾಸುದೇವನು ದ್ವಾರಕೆಯಿಂದ ಗೋಪಿ ಬೆಣ್ಣೆಕೊಡು ಎಂದು ಕಡಗೋಲನೆ ಸೆಳೆಕೊಂಡ||
ಬಲಗೈಲಿ ಕಡಗೋಲು ಪಾಲ್ ಗಡಲಾಗ ತೆಗಿನೀನು ಹಡಗದಿಂದಲಿ ಬಂದು ಗೋಪಿಚಂದನದೊಳಗಡಗಿದನು||
ನಡುಸಾಗರದಲಿ ಆ ಹಡಗು ನಡಿಮುಡಿಮಿಸಗದಲಿರಲು ಎನ್ನೊಡೆಯ ಮಧ್ವರಾಯರಿಗೆ ಅರುಹಿದರಾಗ||

ಆನಂದಮುನಿ ಜ್ಞಾನದಿಂದ ಇರಲು ಆ ಮಾತನು ಕೇಳುತಲಿ ಶ್ಯಾಟಿಕೊನೆಯಲಿ ಬೀಸಿ ಕರೆದರು ಹಡಗು||
ಶ್ಯಾಟಿ ಕೊನೆಯನು ಬೀಸಲು ಆ ಕ್ಷಣ ನಡೆದಿತು ಹಡಗು ಬೇಕಾದವಸ್ತು ಕೊಟ್ಟೆವು ಗುರುರಾಯರೆ ಚಿತೈಸೆಂದರು,ಮುತ್ತು ಮಾಣಿಕ್ಯ ನವರತ್ನ ಘಟ್ಟಿಸುವರ್ಣದ ಖಣಿಯು ಬೇಕಾದವಸ್ತುವು ಕೊಟ್ಟೆವು ಚಿತ್ತೈಸೆಂದರು
||
ಮುತ್ತುಮಾಣಿಕ್ಯ ನಮಗೇಕೆ ಘಟ್ಟಿಕೊಂಡು ಗೋಪಿಚಂದನವ ಮಿಕ್ಕಾದ ವಸ್ತುನಮಗ್ಯಾತಕ ಕೌಪೀನ ಇದ್ದರೆ ಸಾಕು||
ಮುನ್ನೂರಾಳು ಒಂದಾಗಿ ಗೋಪಿಚಂದನದ ಘಟ್ಟಿ ಎತ್ತಲು ಬರದೆ ನಮ್ಮ ಆನಂದಮುನಿ ಸಂಭ್ರಮದಿ ಕೈಯಲಿ ಪಿಡಿದು
ದ್ವಾದಶಸ್ತೋತ್ರವ ಹೇಳುತ ದೇವರನು ಶಿರಸಿನ ಮೇಲೆ ಇಟ್ಟುಕೊಂಡರು ವಾಯುಬ್ರಹ್ಮರು ಬಮ್ಮನಸ್ತುತಿ ಮಾಡಿದರು ಮಚ್ಛಕೂರ್ಮ ವರಹಗೆ ಜಯತು ಭಕ್ತವತ್ಸಲ ನರಸಿಂಹ ಸೃಷ್ಟಿ ಅಳೆದ ವಾಮನ ತ್ರಿವಿಕ್ರಮಗ ಜಯತು ಜಯತು ದಾನವರ ಕುಲ ಸಂಹಾರವ ಮಾಡಲು ಅಪರಿಮಿತಿ ಬೌದ್ಧ ಕಲ್ಕಿ ಎಂದು ಪೊಗಳಿದರು ಒಡಬಂಡೇಶ್ವರದಲ್ಲಿ ಒಡೆದರು ಗೋಪಿಚಂದನವ ಕಡಗ ಕಂಠಮಾಲೆ ಲಕ್ಷ್ಮೀಸಹಿತಾಗಿ ನಿಂತ ಮಲ್ಲಿಗೆ ಹೂವಿನ ಮಳೆಯ ಚಲ್ಲಿದನು.ದೇವೇಂದ್ರನಲ್ಲೆ ಮಹಾಲಕ್ಷ್ಮೀ ಬಂದು ವನಮಾಲೆ ಹಾಕಿದಳು ಜಾಜಿಹೂವಿನ ಮಳೆಯ ಸೂಸಿದನು ದೇವೇಂದ್ರಕಾಂತೆ ಮಹಾಲಕ್ಷ್ಮೀ ಬಂದು ವನಮಾಲೆ ಹಾಕಿದಳು ಮಂಗಳ ಜಯ ಜಯ ಹರಿಗೆ ಮಂಗಳ ಜಯಶಿರಿಗೆ ಮಂಗಳ ವರದ ಶ್ರೀಪುರಂದರವಿಠಲಗೆ.

Kēśava nārāyaṇaru śēṣana mēle varagiralu ācāra vaḍeyaraḍhavaḷādaru pēḷuvenu||

kōṭibrahmāṇḍavaḷaga dāsamukhya prāṇanātha kr̥tayugadali vāyu avatāranādāga ||

trētāyugadali raghupana dāsanāgi hanumanta tā dvāparayugadalli bhīmasēnanāgi avatarisidanu||

kaliyugadali madhvarāyaru gurumunirāyarāgi avatarisi|| hari paradēvate embō birudāvaḷeya||

ānandamuni avatarisalu jñānahuṭṭitu. Tribhuvake vāyu modalāda dēvategaḷu nalinalidāḍe||

badarinārāyaṇa anīrūpadinda raghunāthana nijadāsa badari,kāśivāsa,dakṣiṇaśaradhige nandā||

daṇḍettalu madhvarāyaru bhumaṇḍalavella kadaḷidavu kamaṇḍala nīru gōvindana sambhramadārcanege||

oṇagi hōgo bit beḷege maḷebandāyitu haribhakti prakaṭisidaru gururāyaru||

haribhaktimadagiriya sujanara cintāmaṇiya praḷayabhairavanembo saṅkara idurige bandā||

praḷayabhairava saṅkaraga hr̥daya sīḷida mūru jagaka dharaṇi mēle meredaru tāv yatiya||

madhvaśāstrada ati nipuṇā padmanābhanu ḍiṅgarīyē birudina cintāmaṇi gururāyaru horagahoraṭaru bēga||

dāsara mēle kr̥peyinda vāsudēvanu dvārakeyinda gōpi beṇṇekoḍu endu kaḍagōlane seḷekoṇḍa||

balagaili kaḍagōlu pāl gaḍalāga teginīnu haḍagadindali bandu gōpicandanadoḷagaḍagidanu||

naḍusāgaradali ā haḍagu naḍimuḍimisagadaliralu ennoḍeya madhvarāyarige aruhidarāga||

ānandamuni jñānadinda iralu ā mātanu kēḷutali śyāṭikoneyali bīsi karedaru haḍagu||

śyāṭi koneyanu bīsalu ā kṣaṇa naḍeditu haḍagu bēkādavastu koṭṭevu gururāyare citaisendaru,muttu māṇikya navaratna ghaṭṭisuvarṇada khaṇiyu bēkādavastuvu koṭṭevu cittaisendaru ||

muttumāṇikya namagēke ghaṭṭikoṇḍu gōpicandanava mikkāda vastunamagyātaka kaupīna iddare sāku||

munnūrāḷu ondāgi gōpicandanada ghaṭṭi ettalu barade nam’ma ānandamuni sambhramadi kaiyali piḍidu dvādaśastōtrava hēḷuta dēvaranu śirasina mēle iṭṭukoṇḍaru vāyubrahmaru bam’manastuti māḍidaru macchakūrma varahage jayatu bhaktavatsala narasinha sr̥ṣṭi aḷeda vāmana trivikramaga jayatu jayatu dānavara kula sanhārava māḍalu aparimiti baud’dha kalki endu pogaḷidaru oḍabaṇḍēśvaradalli oḍedaru gōpicandanava kaḍaga kaṇṭhamāle lakṣmīsahitāgi ninta mallige hūvina maḷeya callidanu.Dēvēndranalle mahālakṣmī bandu vanamāle hākidaḷu jājihūvina maḷeya sūsidanu dēvēndrakānte mahālakṣmī bandu vanamāle hākidaḷu maṅgaḷa jaya jaya harige maṅgaḷa jayaśirige maṅgaḷa varada śrīpurandaraviṭhalage.

 

Posted in dasara padagalu, MADHWA, sripadarajaru

Harihararu sariyemba marulu janaru

ಹರಿಹರರು ಸರಿಯೆಂಬ ಮರುಳು ಜನರು
ಹರಿಹರರ ಚರಿತೆಯನು ತಿಳಿದು ಭಜಿಸುವುದು || ಪ ||
ಸುರರು ಮುನಿಗಳು ಕೂಡಿ ಪರದೈವವಾರೆಂದು
ಅರಿಯಬೇಕೆಂದೆರಡು ವರಧನುಗಳಹರಿಹರರಿಗಿತ್ತು
ಸಂಗರವ ಮಾಡಿಸಿ ನೋಡೆ
ಮುರಹರನು ಪುರಹರನ ಗೆಲಿದುದರಿಯಾ || 1 ||

ಹರನ ಕುರಿತ ಸುರ ಮಹತಪವ ಮಾಡಲು
ಮೆಚ್ಚಿವರವನವಗಿತ್ತು ಹರ ಬಳಲಿ ಓಡಿಬರಲು
ಹರಿ ಬಂದವನ ಕರವ ಶಿರದ ಮ್ಯಾಲಿರಿಸಿ
ಖಳ-ನುರುಹಿ ಹರನನು ಕಾಯಿದ ಕಥೆಯ ನೀನರಿಯಾ || 2 ||

ದೂರ್ವಾಸರೂಪ ಹರನಂಬರೀಷನ ಮುಂದೆ
ಗರ್ವವನು ಮೆರೆಸಿ ಜಡೆಯನು ಕಿತ್ತಿಡೆ
ಸರ್ವಲೋಕದೊಳವನ ಚಕ್ರನಿಲಲೀಯದಿರೆ
ಉರ್ವೀಶನನು ಸಾರಿ ಉಳಿದನರಿಯಾ || 3 ||

ಹರನಂಶ ದ್ರೋಣಸುತನು ಪಾಂಡವಾ ಎಂದು
ಉರವಣಿಸಿ ನಾರಾಯಣಾಸ್ತ್ತ್ರವನು ಬಿಡಲು
ಹರಿ ಬಂದು ಬೇಗ ತನ್ನಸ್ತ್ರವನು ತಾ ಸೆಳೆದು
ಶರಣಾಗತರ ಕಾಯಿದ ಕಥೆಯನರಿಯಾ || 4 ||

ನರನಾರಾಯಣರು ಬದರಿಕಾಶ್ರಮದಲಿರೆ
ಹರನು ಹರಿಯೊಡನೆ ಕದನವನು ಮಾಡೆ
ಹರಿ ಹರನ ಕಂಠವನು ಕರದಲಿ ಪಿಡಿದು ನೂಕೆ
ಕೊರಳ ಕಪ್ಪಾದ ಕಥೆ ಕೇಳಿ ಅರಿಯಾ || 5 ||

ಹರಿ ಸುರರಿಗಮೃತವನು ಎರೆದ ರೂಪವನೊಮ್ಮೆ
ಹರ ನೋಡುವೆನೆಂದು ಸಂಪ್ರಾರ್ಥಿಸೆ
ಪರಮ ಮೋಹನ ರೂಪಲಾವಣ್ಯವನು ಕಂಡು
ಹರ ಮರಳುಗೊಂಡ ಕಥೆ ಕೇಳಿ ಅರಿಯಾ || 6 ||

ಹರಿಯ ಮೊಮ್ಮನ ಬಾಣಾಸುರನು ಸೆರೆವಿಡಿಯೆ
ಗರುಡವಾಹನನಾಗಿ ಕೃಷ್ಣ ಬಂದು
ಹರನ ಧುರದಲಿ ಜಯಿಸಿ ಅವನ ಕಿಂಕರನ
ಸಾ-ವಿರ ತೋಳುಗಳ ತರಿದ ಕಥೆಯ ನೀನರಿಯಾ || 7 ||

ಸುರತರುವ ಕಿತ್ತು ಹರಿ ಸುರಲೋಕದಿಂದ ಬರೆ
ಹರನು ಹರಿಯೊಡನೆ ಕದನವನು ಮಾಡೆ
ತರಹರಿಸಲಾರದೋಡಿದ ಕಥೆಯ ನೀನೊಮ್ಮೆ
ಹಿರಿಯರ ಮುಖದಿ ಕೇಳಿ ನಂಬು ಹರಿಯಾ || 8 ||

ಹರಸುತನು ತಪದಿಂದ ಹರಿಯ ಚಕ್ರವ ಬೇಡೆ
ಪರಮ ಹರುಷದಲಿ ಚಕ್ರವನೀಯಲುಭರದಿಂದ
ಧರಿಸಲಾರದೆ ಚಕ್ರವನಂದುಹರನು
ಭಂಗಿತನಾದನೆಂದರಿಯಲಾ || 9 ||

ರಾವಣಾಸುರ ಕುಂಭಕರ್ಣ ನರಕಾದಿಗಳು
ಶೈವತಪವನು ಮಾಡಿ ವರವ ಪಡೆಯೆ
ಅವರುಗಳನು ವಿಷ್ಣು ನರರೂಪಿನಿಂದರಿದು
ದೇವರ್ಕಳನು ಕಾಯಿದ ಕಥೆಯ ನೀನರಿಯಾ || 10 ||

ಗಂಗಾಜನಕನ ಸನ್ಮಂಗಲ ಚರಿತ್ರ್ರೆಗಳ
ಹಿಂಗದಲೆ ಕೇಳಿ ಸುಖಿಸುವ ಜನರಿಗೆ
ಭಂಗವಿಲ್ಲದ ಪದವನಿತ್ತು ಸಲಹುವ
ನಮ್ಮರಂಗವಿಠ್ಠಲರಾಯನ ನೆರೆ ನಂಬಿರೋ || 11 ||

Harihararu sariyemba maruḷu janaru hariharara cariteyanu tiḷidu bhajisuvudu || pa ||

suraru munigaḷu kūḍi paradaivavārendu ariyabēkenderaḍu varadhanugaḷaharihararigittu saṅgarava māḍisi nōḍe muraharanu puraharana gelidudariyā || 1 ||

harana kurita sura mahatapava māḍalu meccivaravanavagittu hara baḷali ōḍibaralu hari bandavana karava śirada myālirisi khaḷa-nuruhi harananu kāyida katheya nīnariyā || 2 ||

dūrvāsarūpa haranambarīṣana munde garvavanu meresi jaḍeyanu kittiḍe sarvalōkadoḷavana cakranilalīyadire urvīśananu sāri uḷidanariyā || 3 ||

harananśa drōṇasutanu pāṇḍavā endu uravaṇisi nārāyaṇāsttravanu biḍalu hari bandu bēga tannastravanu tā seḷedu śaraṇāgatara kāyida katheyanariyā || 4 ||

naranārāyaṇaru badarikāśramadalire haranu hariyoḍane kadanavanu māḍe hari harana kaṇṭhavanu karadali piḍidu nūke koraḷa kappāda kathe kēḷi ariyā || 5 ||

hari surarigamr̥tavanu ereda rūpavanom’me hara nōḍuvenendu samprārthise parama mōhana rūpalāvaṇyavanu kaṇḍu hara maraḷugoṇḍa kathe kēḷi ariyā || 6 ||

hariya mom’mana bāṇāsuranu sereviḍiye garuḍavāhananāgi kr̥ṣṇa bandu harana dhuradali jayisi avana kiṅkarana sā-vira tōḷugaḷa tarida katheya nīnariyā || 7 ||

surataruva kittu hari suralōkadinda bare haranu hariyoḍane kadanavanu māḍe taraharisalāradōḍida katheya nīnom’me hiriyara mukhadi kēḷi nambu hariyā || 8 ||

harasutanu tapadinda hariya cakrava bēḍe parama haruṣadali cakravanīyalubharadinda dharisalārade cakravananduharanu bhaṅgitanādanendariyalā || 9 ||

rāvaṇāsura kumbhakarṇa narakādigaḷu śaivatapavanu māḍi varava paḍeye avarugaḷanu viṣṇu nararūpinindaridu dēvarkaḷanu kāyida katheya nīnariyā || 10 ||

gaṅgājanakana sanmaṅgala caritrregaḷa hiṅgadale kēḷi sukhisuva janarige bhaṅgavillada padavanittu salahuva nam’maraṅgaviṭhṭhalarāyana nere nambirō || 11 ||

 

Posted in dasara padagalu, MADHWA

dasara pada on Sri sathyadheera theertharu

ಪಾರು ಮಾಡೋ ಸತ್ಯಧೀರನೆ ನಿನ್ನಯ ಚಾರು
ಚರಣಗಳಿಗೆರಗುವೆನು ||ಪ||

ಘೋರಮಾಯದ ಸಂಸಾರದೊಳಗೆ ಈಸಲಾರೆನೊ
ವರಮತಿಗುಣಗನ ಮಣಿಯೆ ||ಅ.ಪ||

ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ
ಮತಿಹೀನರಪಹಾಸ್ಯ ಮಾಡಿದರೆ
ಸತತ ದಶಮಾಷ್ಟ ವರ್ಷಗಳ ಪರಿಯಂತ ಹರಿಸೇವೆಯಾ
ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ
ಹಿತದಿಂದ ಕೈಗೊಂಡ ದಶರಥನಂದ ರಘುರಾಯ
ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ
ಭಕುತರನು ಕರೆವುತಲಿ ಬರುತಿರುವಂತೆ ನಿನ್ನಯ
ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ ||

ವರಮಧ್ವಮತಾಭಿಮಾನಿಯೆ ನಿನ್ನಯ
ದರುಶನದಿಂದ ಪಾವನನಾದೆನೋ
ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ
ವರಸೇವಾ ಸರ್ವಜ್ಞ ಪೀಠಕೆ
ಸರಸ ಶೋಭಿಸುವಾ ಹರಿವಾಯುಗಳಲಿ
ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ
ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ
ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ ||

ಆನಂದ ಜ್ಞಾನದಾಯಕನಾಜ್ಞೆಯಿಂ ಸತ್ಯ ಜ್ಞಾನಾ-
ನಂದಗಿತ್ತಿ ಉತ್ತಮಪದವಾ
ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ
ಅನುಮಾನ ಮಾಡದೇ ಪಾಲಿಸೋ ದೇವಾ
ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ
ಬಿಡಿಸೊ ದುರ್ಭಾವನಜ ಸಂಭವಾ ಧೀರ ಶ್ರೀಹನುಮೇಶವಿಠಲ
ಸೇವಕನೋ
ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ ||

Pāru māḍō satyadhīrane ninnaya cāru caraṇagaḷigeraguvenu ||pa||

ghōramāyada sansāradoḷage īsalāreno varamatiguṇagana maṇiye ||a.Pa||

yati āśramadi sītā patiya pūjisutire matihīnarapahāsya māḍidare satata daśamāṣṭa varṣagaḷa pariyanta harisēveyā ati bhakutiyindali māḍidyō jīyā hitadinda kaigoṇḍa daśarathananda raghurāya yativarane ninnaya kṣitiyoḷage hari bhakutaranu karevutali barutiruvante ninnaya prati diganta pariharisida varakīrti āśrayadinda bande ||

varamadhvamatābhimāniye ninnaya daruśanadinda pāvananādenō dorakādo yandigellarige ī gurugaḷa varasēvā sarvajña pīṭhake sarasa śōbhisuvā harivāyugaḷali niścayada bhakutiyanu pālisuvā nirutadali kāvā paramabhaktara bhāgyanidhiyandaridu hambalisutali ninnaya caraṇakeragide tvaradi karuṇisi poreyo śaraṇara san̄jīvā ||

ānanda jñānadāyakanājñeyiṁ satya jñānā- nandagitti uttamapadavā gānalōlana jagatpālana priyanē tava sēvā anumāna māḍadē pālisō dēvā tanuvanoppisi iḍuve ninnaḍigaḷa mēle śiravā biḍiso durbhāvanaja sambhavā dhīra śrīhanumēśaviṭhala sēvakanō anucitōcitakarma kr̥ṣṇārpaṇavenuva sumanava koḍu nī ||

Posted in dasara padagalu, MADHWA, madhwa sarovara, Vijaya dasaru

Dasara pada on Madhwa sarovara, Udupi

ಮಧ್ವ ಸರೋವರದ ಸ್ನಾನವ ಮಾಡಿರೊ
ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು ||pa||

ಕೃತಯುಗದಲಿ ಇದೇ ಅನಂತ ಸರೋವರ
ತ್ರೇತಾಯುಗದಲ್ಲಿ ವರುಣತೀರ್ಥ
ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ-
ನ್ನತ ಕಲಿಯುಗದಲ್ಲಿ ಮಹಾ ತೀರಿಥ ||1||

ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ-
ಸ್ತರವಾಗಿ ಕೊಳುತಿಪ್ಪಳು ಉಪೇಕ್ಷದಿ
ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ
ನಿರುತದಲ್ಲಿ ತೀವ್ರಗತಿ ಕೊಡುವಳೂ||2||

ಸಕಲ ವೇದಶಾಸ್ತ್ರ ಓದಿದವನಾದರೂ
ಶಕುತಿವಂತನಾಗಿ ಇದ್ದನಾಗೆ
ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು
ಶಕಲ ಮತಿಯಲಿ ಮಹಾನರಕ ಭುಂಜಿಸುವಾ ||3||

ಒಂದೆ ಮಜ್ಜನ ಮಾಡೆ ಅನಂತ ಜನುಮಕೆ
ತಂದು ಕೊಡುವದು ನರಗೆ ಮಿಂದ ಫಲವೊ
ಎಂದೆಂದಿಗೆ ಇಲ್ಲಿ ಬಿಡದೆ ವಾಸವಾದ
ಮಂದಿಗಳ ಪುಣ್ಯ ಪ್ರತಾಪ ಎಣಿಸುವರಾರು ||4||

ಆದಿಯಲ್ಲಿ ಇದ್ದ ಲಿಂಗ ಶರೀರವು
ಛೇದಿಸುವದಕೆ ಇದೇ ಸ್ನಾನವೆನ್ನಿ
ಮೋದ ಮೂರುತಿ ನಮ್ಮ ವಿಜಯವಿಠ್ಠಲ ಕೃಷ್ಣ
ಭೇದಾರ್ಥ ಮತಿಕೊಟ್ಟ ಭೇದವನು ತೊಲಗಿಸುವಾ||5||

Madhva sarōvarada snānava māḍiro bud’dhivantaru kēḷi idara mahātmeyanu ||pa||

kr̥tayugadali idē ananta sarōvara trētāyugadalli varuṇatīrtha kṣitiyoḷage dvāparadi candra puṣkaraṇi u- nnata kaliyugadalli mahā tīritha ||1||

suranadī mikkāda sthānadali sēve vi- staravāgi koḷutippaḷu upēkṣadi dhareyoḷage illi guru madhvamuni sarvārtha nirutadalli tīvragati koḍuvaḷū||2||

sakala vēdaśāstra ōdidavanādarū śakutivantanāgi iddanāge sukha tīrtha sarōvarada snāna māḍadiralu śakala matiyali mahānaraka bhun̄jisuvā ||3||

onde majjana māḍe ananta janumake tandu koḍuvadu narage minda phalavo endendige illi biḍade vāsavāda mandigaḷa puṇya pratāpa eṇisuvarāru ||4||

ādiyalli idda liṅga śarīravu chēdisuvadake idē snānavenni mōda mūruti nam’ma vijayaviṭhṭhala kr̥ṣṇa bhēdārtha matikoṭṭa bhēdavanu tolagisuvā||5||

Posted in dasara padagalu, MADHWA, purandara dasaru, sampradaaya haadu

Dhristi parihara haadu

ಎಂಥಾ ಪಾಪಿ ದೃಷ್ಟಿ ತಾಗಿತು, ಗೋಪಾಲಕೃಷ್ಣಗೆ
ಕೆಟ್ಟ ಪಾಪಿ ದೃಷ್ಟಿ ತಾಗಿತು ||pa||

ಶಿಶು ಹಸಿದನೆಂದು ಗೋಪಿ
ಮೊಸರು ಕುಡಿಸುತ್ತಿರಲು ನೋಡಿ
ಹಸಿದ ಬಾಲರ ದೃಷ್ಟಿ ತಾಗಿ
ಮೊಸರು ಕುಡಿಯಲೊಲ್ಲನೆ ||1||

ಕೃಷ್ಣ ಹಸಿದನೆಂದು ಗೋಪಿ
ಬಟ್ಟಲೊಳಗೆ ಕ್ಷೀರ ಕೊಡಲು
ಕೆಟ್ಟ ಬಾಲರ ದೃಷ್ಟಿ ತಾಗಿ
ಕೊಟ್ಟ ಹಾಲು ಮುಟ್ಟನೆ ||2||

ಚಿಣ್ಣ ಹಸಿದನೆಂದು ಗೋಪಿ
ಬೆಣ್ಣೆ ಕೈಯಲಿ ಕೊಡಲು ನೋಡಿ
ಸಣ್ಣ ಬಾಲರ ದೃಷ್ಟಿ ತಾಗಿ
ಬೆಣ್ಣೆ ವಿಷಮವಾಯಿತೆ ||3||

ಅಂಗಿ ಹಾಕಿ ಉಂಗುರವಿಟ್ಟು
ಕಂಗಳಿಗೆ ಕಪ್ಪನಿಟ್ಟು
ಅಂಗಳದೊಳು ಆಡೊ ಕೃಷ್ಣಗೆ
ಹೆಂಗಳಾ ದೃಷ್ಟಿ ಇದೇನೋ ||4||

ಶಲ್ಲೆ ಉಡಿಸಿ ಮಲ್ಲೆ ಮುಡಿಸಿ
ಚೆಲ್ವ ಫಣೆಗೆ ತಿಲಕನಿಟ್ಟು
ವಲ್ಲಭ ಪುರಂದರವಿಠಲನ
ಫುಲ್ಲನೇತ್ರರು ನೋಡಿದರೇನೋ ||5||

Enthā pāpi dr̥ṣṭi tāgitu, gōpālakr̥ṣṇage
keṭṭa pāpi dr̥ṣṭi tāgitu ||pa||

śiśu hasidanendu gōpi
mosaru kuḍisuttiralu nōḍi
hasida bālara dr̥ṣṭi tāgi
mosaru kuḍiyalollane ||1||

kr̥ṣṇa hasidanendu gōpi
baṭṭaloḷage kṣīra koḍalu
keṭṭa bālara dr̥ṣṭi tāgi
koṭṭa hālu muṭṭane ||2||

ciṇṇa hasidanendu gōpi
beṇṇe kaiyali koḍalu nōḍi
saṇṇa bālara dr̥ṣṭi tāgi
beṇṇe viṣamavāyite ||3||

aṅgi hāki uṅguraviṭṭu
kaṅgaḷige kappaniṭṭu
aṅgaḷadoḷu āḍo kr̥ṣṇage
heṅgaḷā dr̥ṣṭi idēnō ||4||

śalle uḍisi malle muḍisi
celva phaṇege tilakaniṭṭu
vallabha purandaraviṭhalana
phullanētraru nōḍidarēnō ||5||

Posted in dasara padagalu, MADHWA, sampradaaya haadu, Vadirajaru

Harshina kuttuva haadu/Turmeric grinding ceremony song

ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ
ಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿ
ಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ ||ಪ||

ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ
ವರ ವಾಣಿರಮಣಗೆ ಶರಣೆಂಬೆ ಸುವ್ವಿ
ವರ ವಾಣಿರಮಣಗೆ ಶರಣೆಂದು ಪೇಳಿದ
ಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ ||1||

ಪಕ್ಷಿ ವಾಹನ್ನ ಜಗಕ್ಕೆ ಮೋಹನ್ನ
ರಕ್ಕಸದಾಹನ್ನನಿವ ಸುವ್ವಿ
ರಕ್ಕಸದಾಹನ್ನನಿವ ತನ್ನ ಮರೆ-
ಹೊಕ್ಕರ ಕಾಯ್ವ ಪ್ರಸನ್ನನಿವ ಸುವ್ವಿ ||2||

ಯಶೋದೆಯ ಕಂದ ತನ್ನ ವಿಷವನುಣ್ಣೆಂದ
ಕರ್ಕಶದ ಪೂತನಿಯ ಶಿಶುವಾಗಿ ಸುವ್ವಿ
ಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮ
ಎಸೆವ ಗೋವಿಂದ ಪಾಲಿಸ ಬಂದ ಸುವ್ವಿ ||3||

ಶಕಟಾಸುರನ್ನ ಮೆಟ್ಟಿ ಕೊಂದ ಬಲು
ವಿಕಟ ದೈತ್ಯನ್ನ ಕೊರಲೆತ್ತಿ ಸುವ್ವಿ
ವಿಕಟದೈತ್ಯನ್ನ ಕೊರಲೆತ್ತಿ ಕೊಂದು ಸರ್ಪನ ಮ-
ಸ್ತಕದಮೇಲೆ ನಲಿವುತ ನಿಂದ ಸುವ್ವಿ||4||

ಕರುಗಳ ಕಣ್ಣಿಯ ಬಿಡುವಾಗ ನಾರಿಯರೆಲ್ಲರು
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುವ್ವಿ
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುರಿದು
ಅವರ್ಬರಲು ಬೆಣ್ಣೆಯ ಕೊಂಡೋಡುವ ಸುವ್ವಿ ||5||

ಮತ್ತಿಯ ಮರಗಳ ಕಿತ್ತುವಾಗ ಅಲ್ಲಿ
ಭೃತ್ಯರಿಗೊಲಿದು ವರವಿತ್ತ ಸುವ್ವಿ
ಭೃತ್ಯರಿಗೊಲಿದು ವರವಿತ್ತ ತನ್ನ
ಮಿತ್ರಜನಕಾಗಿ ಗಿರಿಯೆತ್ತಿದನೆ ಸುವ್ವಿ ||6||

ಮಧುರೆಗೆ ಪೋಗಿ ಮಲ್ಲರಸುವ ನೀಗಿ
ಮದಾಂಧ ಮಾವನ್ನ ಮಡುಹಿದ ಸುವ್ವಿ
ಮದಾಂಧ ಮಾವನ್ನ ಮಡುಹಿದ ಶ್ರೀಕೃಷ್ಣ
ಮುದದಿ ತನ್ನವರ ಮುದ್ದಿಸಿದ ಸುವ್ವಿ ||7||

ಅನಂತಾಸನವೆಂದು ಮತ್ತೊಂದು ನಗರ ಕೃಷ್ಣಗೆ
ಘನೋದಕದ ಮೇಲೆ ಮಿಂಚುತಿಪ್ಪುದು ಸುವ್ವಿ
ಘನೋದಕದ ಮೇಲೆ ಮಿಂಚುತಿಪ್ಪುದು ಅಲ್ಲಿ
ಮನೆ ಮನೆಯಲಿ ಮುಕ್ತರ ಸಂದಣಿ ಸುವ್ವಿ||8||

ಇಂತು ಹಯವದನ ನಿಶ್ಚಿಂತ ಜಗತ್ಕಾಂತ
ಸಂತರನು ಸದಾ ಸಲಹುವ ಸುವ್ವಿ
ಸಂತರನು ಸದಾ ಸಲಹುವ ಮಾರಾಂತರ ಕೃ-
ತಾಂತನ ಬಳಿಗೆ ಕಳುಹುವ ಸುವ್ವಿ ||9||
Suvvi suvvi nam’ma śrīramaṇage suvvi
suvvi suvvi nam’ma bhūramaṇage suvvi
suvvi endu pāḍi sajjanarella kēḷi ||pa||

harige śaraṇembe sirige śaraṇembe
vara vāṇiramaṇage śaraṇembe suvvi
vara vāṇiramaṇage śaraṇendu pēḷida
guruvādirājēndrana kr̥tiyendu suvvi ||1||

pakṣi vāhanna jagakke mōhanna
rakkasadāhannaniva suvvi
rakkasadāhannaniva tanna mare-
hokkara kāyva prasannaniva suvvi ||2||

yaśōdeya kanda tanna viṣavanuṇṇenda
karkaśada pūtaniya śiśuvāgi suvvi
karkaśada pūtaniya śiśuvāgi konda nam’ma
eseva gōvinda pālisa banda suvvi ||3||

śakaṭāsuranna meṭṭi konda balu
vikaṭa daityanna koraletti suvvi
vikaṭadaityanna koraletti kondu sarpana ma-
stakadamēle nalivuta ninda suvvi||4||

karugaḷa kaṇṇiya biḍuvāga nāriyarellaru
poravaḍalu tā pokku pālmosarane suvvi
poravaḍalu tā pokku pālmosarane suridu
avarbaralu beṇṇeya koṇḍōḍuva suvvi ||5||

mattiya maragaḷa kittuvāga alli
bhr̥tyarigolidu varavitta suvvi
bhr̥tyarigolidu varavitta tanna
mitrajanakāgi giriyettidane suvvi ||6||

madhurege pōgi mallarasuva nīgi
madāndha māvanna maḍ’̔uhida suvvi
madāndha māvanna maḍ’̔uhida śrīkr̥ṣṇa
mudadi tannavara muddisida suvvi ||7||

anantāsanavendu mattondu nagara kr̥ṣṇage
ghanōdakada mēle min̄cutippudu suvvi
ghanōdakada mēle min̄cutippudu alli
mane maneyali muktara sandaṇi suvvi||8||

intu hayavadana niścinta jagatkānta
santaranu sadā salahuva suvvi
santaranu sadā salahuva mārāntara kr̥-
tāntana baḷige kaḷuhuva suvvi ||9||

Posted in dasara padagalu, Harapanahalli bheemavva, sampradaaya haadu

Huva mudisuva haadu

ಹೂವ ಮುಡಿಸಿರೆ ಮುಡಿಗ್ಹರಸುತಲಿ
ಮುತ್ತೈದೆಯಾಗೆನುತ
ಹೂವ ಮುಡಿಸಿರೆ ಮುಡಿಗ್ಹರಸುತಲಿ|| ಪ||

ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ
ಸುರಪಾರಿಜಾತ ಸಂಪಿಗೆ ಸತ್ಯಭಾಮೆಗೆ ||1||

ಅರಿಷಿಣ ಕುಂಕುಮ ಬೆರೆಸಿದ ಮಲ್ಲಿಗೆ
ಸುರಪಾರಿಜಾತ ಪುನ್ನಾಗ ಪುಷ್ಪಗಳ ||2||

ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ
ಅರಳು ಮಲ್ಲಿಗೆಯ ಭೀಮೇಶಕೃಷ್ಣನ ಸತಿಗೆ||3||
Hūva muḍisire muḍig’harasutali
muttaideyāgenuta
hūva muḍisire muḍig’harasutali|| pa||

maruga mallige jāji suragi śāvantige
surapārijāta sampige satyabhāmege ||1||

ariṣiṇa kuṅkuma beresida mallige
surapārijāta punnāga puṣpagaḷa ||2||

heraḷu baṅgāra rāgaṭe goṇḍya kyādige
araḷu malligeya bhīmēśakr̥ṣṇana satige||3||

Posted in dasara padagalu, MADHWA, srinivasa, srinivasa kalyana

Srinivasa Kalyana(TTD songs)

A decade back, I remember the srinivasa kalyana conducted by TTD @ Coimbatore. It was a grand celebration and a great treat for eyes and ears! It’s a visual treat!!! Dasara padagalu, wedding rituals, people’s bhakthi all together took us to a new world !!!

I was searching for the songs to post in this blog in the same order. I finally got some time to find the collections of dasara padagalu for various wedding rituals right from mangala snana, aarathi, nandi, alankara, mangalya dharana composed by various Hari dasaru and I am posting the same in English and Kannada format in the attached PDF

srinivasa_kalyana