ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು||pa||
ಭಾಳನೇತ್ರನ ಭಕ್ತರಿಂತು ನೋಡಿಕೊಳ್ಳಿರೈ||a.pa||
ಮೂರುಲಿಂಗ ತನ್ನೊಳು ಮುಖ್ಯವಾಗಿರುವಾಗಬೇರೊಂದು ಲಿಂಗ ಬೆಲೆ ಮಾಡಿ ತಂದು
ತೋರುವಂಗೈಲಿಟ್ಟು ತೋಯ ಪುಷ್ಪವ ನೀಡಿಯಾರ ಮನಕೊಪ್ಪಿಸುವರೀ ಶೀಲವಂತರು ||1||
ಲಿಂಗವೊಂದು ತನ್ನೊಳು ಲೀನವಾಗಿರುವಾಗಅಂಗಭವಿಗಳು ಕೂಡಿ ಆಡಿಕೊಂಬರು
ಅಂಗದನುಭವದರ್ಥವನರಿಯದ ಇಂತಹಭಂಗಿ ಹುಚ್ಚರೆಲ್ಲ ಶಿವನ ಭಕ್ತರಹರೆ |2||
ನಾಗಲಿಂಗ ತನ್ನೊಳು ನಾಟ್ಯವಾಡುತಲಿರಲುಆಗಮಿಸಿದ ಲಿಂಗವ ಬೆದಕಲೇತಕ್ಕೆ
ಕಾಗಿನೆಲೆಯಾದಿಕೇಶವನೆ ನಾಗಶಯನನಾಗಿರಲು ಬೇರೊಂದನರಸಲೇತಕ್ಕೆ ||3||
Kelirai sivasaranaru helalanjike Avudu ||pa||
Balanetrana baktarintu nodikollirai ||a.pa||
Murulinga tannolu mukyavagiruvaga
Berondu linga bele madi tandu
Toruvangailittu toyapushpana nidi
Yara manakoppisuvari silavantaru ||1||
Lingavondu tannolu linavagiruvaga
Angabavigalu kudi adikombaru
Angadanubavadarthavanariyada intaha
Bangi huccarella Sivana Baktarahare ||2||
Nagalinga tannolu natyavadutiralu
Agamisida lingava bedakaletakke
Kagineleyadikesavane nagasayana
Nagiralu berondanarasaletake ||3||
2 thoughts on “Kelirai sivasaranaru helalanjike”