dasara padagalu · krishna · MADHWA

Bandha nindhu raghavendranu

ಬಂದನಿಂದು ರಾಘವೇಂದ್ರನು ಆನಂದದಿಂದಲಿ
ಬಂದನಿಂದು ರಾಘವೇಂದ್ರನು ||ಪ||.

ಕಂದರಾದ ಭಕ್ತ ಜನರ
ಚಂದದಿಂದ ಪೊರೆವೆನೆಂದು ಅ.ಪ.||

ಪರಿಪರಿಯ ವೈಭವವನು ಪಡಲಿಬೇಕೆಂದು
ಕರದು ತರಲು ಕರಕರಿಯ
ಕರದು ಮನವ ನೋಡಬೇಕೆಂದು||

ಕರುಣಾನಿಧಿ ಎಂದೆನಿಸಿ ನಿನಗೆ ಥರವೆ ಇದು ಎಂದು
ಪರಿಪರಿಯಲಿ ಸ್ತುತಿಸುತಿರಲು
ಸ್ಥಿರವಾರದಿ ಹರುಷ ತೋರಲು ||

ಬಂದ ಬುಧರಿಂದ ಪೂಜೆನಂದಗೈಸ ಬೇ
ಕೆಂದು ತುಂಗಜಲವ ತರುತಿರÉ
ಬಂದ ಮಾಯದಿಂದ ಹರಿಯು ||

ದ್ವಿಜರ ಹಸ್ತಜಲವ ಶ್ರೀನಿವಾಸ ಬೇಡಲು
ದ್ವಿಜರು ಕೊಡಲು ಗುರುಗಳನ್ನು
ಪೂಜೆಗೈದೆನೆಂದು ನುಡಿದ ||

ಈ ತೆರದ ಕೌತುಕವ ಶ್ರೀನಾಥ ತೋರುತ
ಆ ತಕ್ಷಣದಿ ಮಾಯವಾಗೆ
ರೀತಿಯಿಂದ ಪೂಜೆಗೈಯ್ಯಲು ||

ಮಂತ್ರಾಲಯದ ಮಂದಿರನಿಗೆ ಪಂಚಾ
ಮೃತದಿಂದ ಸಂತೋಷದಲಿ ಪೂಜೆ
ಗೈದು ಪಂಚಮೃಷ್ಟಾನ್ನ ಬಡಿಸೆ||

ಶ್ರೀನಿವಾಸ ಸಹಿತ ಶ್ರೀ ರಾಘವೇಂದ್ರರು
ಸಾನುರಾಗದಿ ಸೇವೆಕೊಂಡು
ನಾನಾ ವಿಧದ ಹರುಷಪಡಿಸೆ ||

ಎನ್ನ ಮನಕೆ ಹರುಷಕೊಡಲು ನಿನ್ನ ಭಜಿಸುವೆ
ನಿನ್ನ ಮನಕೆ ಬಾರದಿರ್ದೊಡೆ
ಮುನ್ನೆ ಪೋಗಿ ಬಾರೆಂದೆನಲು ||

ತುಂಗಮಹಿಮ ರಾಘವೇಂದ್ರರ ಮಂಗಳದ ಪುತ್ರ
ಕಂಗಳೀಗೆ ತೋರಿ ಅಂತ
ರಂಗದಲ್ಲಿ ಹರುಷವಿತ್ತು ||

ಶ್ರೀ ಗುರುಗಳ ಕರುಣದಿಂದ ರಾಘವೇಂದ್ರನು
ಭಾಗವತರ ಪೊರೆವೆನೆಂದು
ಯೋಗಿ ಶೇಷಾಂಶ ಸಹಿತ ||

ಇಂತು ರಾಘವೇಂದ್ರ ಗುರು ತಾ ಶಾಂತನಾಗುತ
ಶಾಂತ ಗೋಪಾಲಕೃಷ್ಣವಿಠ್ಠಲನ
ಅಂತರಂಗದಿ ತೋರ್ವೆನೆಂದು ||

Banda nindu raghavendranu Anandadindali banda nindu raghavendranu ||pa||

Kanmdarada Bakta janara
Chandadinda porevenendu ||a.pa||

Paripariya vaibavavanu padalibekendu
Karadu taralu karakariya
Karadu manava nodabekemdu ||1||

Karunanidhi endenisi ninage tharave idu endu
Paripariyali stutisutiralu
Sthiravaradi harusha toralu ||2||

Banda budharinda pujenandagaisa be
Kendu tungajalava tarutiraé
Banda mayadinda hariyu ||3||

Dvijara hastajalava srinivasa bedalu
Dvijaru kodalu gurugalannu
Pujegaidenemdu nudida ||4||

I terada kautukava srinatha toruta
A takshanadi mayavage
Ritiyinda pujegaiyyalu ||5||

Mantralayada mandiranige pancha
Mrutadinda santoshadali puje
Gaidu panchamrushtanna badise||6||

Srinivasa sahita sri ragavendraru
Sanuragadi sevekomdu
Nana vidhada harushapadise ||7||

Enna manake harushakodalu ninna Bajisuve
Ninna manake baradirdode
Munne pogi barendenalu ||8||

Tunga mahima ragavendrara mangalada putra
Kangalige tori anta
Rangadalli harushavittu ||9||

Sri gurugala karunadinda raghavendranu
Bagavatara porevenendu
Yogi seshamsa sahita ||10||

Intu ragavendra guru ta santanaguta
Santa gopalakrushnaviththalana
Antarangadi torvenendu ||11||

 

2 thoughts on “Bandha nindhu raghavendranu

Leave a comment