dasara padagalu · ekadashi · MADHWA

Hari dina pataka parihara

ಹರಿದಿನ ಪಾತಕ ಪರಿಹಾರ ದನುಜರ
ಕರುಣಕ್ಕೆ ಕಾರಣ ನಂಬೆಲೊ ಮನುಜ ||pa||

ಗಂಗೆ ಮೊದಲಾದ ತೀರ್ಥಂಗಳೆಣೆಯ ಶ್ರೀ-ರಂಗ ಮೊದಲಾದ ಕ್ಷೇತ್ರವು ಸರಿಯೆ
ಉ-ತ್ತುಂಗ ಜಪತಪÀ ಹೋಮಂಗಳೆದುರೆ ಶ್ರೀ-ರಂಗನಾಥನ ದಿನದೊಂದುಪವಾಸಕೆ ||1||

ಹಿಂದೆ ಮಾಡಿದ ಪಾಪ ಪರಿಹಾರವು ನೀ-ನಿಂದು ಮಾಡುವ ಸುಕೃತ ಬೆಳಸು
ಮುಂದಣ ಮುಕುತಿಗೆ ಕಲ್ಪ ಲತಾಂಕುರಇಂದಿರೇಶನ ದಿನದೊಂದುಪವಾಸಕೆ ||2||

ರುಕುಮಾಂಗದ ಮೊದಲಾದ ಭಕುತರೆಲ್ಲಸಕಲವ ಬಿಟ್ಟು ಏಕಾದಶಿ ವ್ರತವ
ಭಕುತಿಯಿಂ ಕೂಡಿ ಶ್ರೀಕೃಷ್ಣನ ಮೆಚ್ಚಿಸಿಮುಕುತಿ ಸೂರೆಯಗೊಂಡರೆಂಬುದನರಿಯ ||3||

Haridina patakaparihara divijara
Karunakke karana nambelo manuja | pa |

Gange modalada tirthangaleneye
Sriranga modalada kshetravu sariye
Uttunga japatapa homagaledure
Sriranganathana dinakondupavasake | 1 |

Hinde madida papa pariharavu,
Ninindu maduva sukruta belesu
Mundana mukutige kalpalatankura
Indiresana dinadondupavasake | 2 |

Rukumangada modalada Bakutare
Sakalava bittu ekadasivratav
Bakutiyim kudi srikrushnana mecchisi
Mukuti suregondarembudanariye| 3 |

One thought on “Hari dina pataka parihara

Leave a comment