dasara padagalu · kanakadasaru · MADHWA · narasimha

Kande na uddanda narasimhana

ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ –
ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ||pa||

ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು
ಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆ
ಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ||1||

ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿ
ಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು
ನರನರವನು ತೆಗೆದು ನಿರ್ಗಳಿತ ಶೋಣಿತ
ಸುರಿಯೆಹರಿಹರಿದು ಕರುಳ ಕೊರಳೊಳಿಟ್ಟವನ||2||

ಪುರಜನರು ಹಾಯೆನಲು ಸುರರು ಹೂಮಳೆ
ಗರೆಯೆತರತರದ ವಾದ್ಯ ಸಂಭ್ರಮಗಳಿಂದ
ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ
ಕರುಣಾಳು ಕಾಗಿನೆಲೆಯಾದಿಕೇಶವನ||3||

Kande na uddanda narasimhana
Kande na tanda tandada hindu hindu daiva pracanda
Ripuganda uddanda narasimhana kandenayya || pa ||

Gudugudisi kambadali dhadadhada sidilu sidiye |
Kidikidisi senudiya dagalodane mudi pididu |
Gada gadane nadu naduge gudugudisi sabe bedare |
Hidi hididu hiranyakana todeyolide kedahidane

Uradolappalisi aribasira sarasa sili |
Paripariyali carmaveledeleyalu |
Nara naratane negedu nirgalita sonita suriye ||

Hari haridu karula koralolittavana |
Purajanaru hayendu suraru hu malegareye |
Hari hari saranendu stutisi sisu mereye |
Karunalu kaginele adikesavana ||

 

One thought on “Kande na uddanda narasimhana

Leave a comment