MADHWA · sulaadhi · Vijaya dasaru

Madi suladi

ಮಡಿ ಸುಳಾದಿ

ಧ್ರುವತಾಳ
ಮಡಿ ಮಾಡುವದೊ ಮಾನವ ನಡತಿ ನುಡತಿ ತಿಳಿದೂ
ಬಿಡದೆ ಪ್ರತಿದಿನ ಮಿರ್ಮಲದಿ ಮಡಿ, ನೀರೊಳಗೆ ಒಗೆದು
ಮಡಿಸಿ ಬಗೆಬಗೆಯಿಂದ ಮಡಕಿ ಹಾಕಿಟ್ಟರೆ ಮಡಿಯಲ್ಲ |
ಧೃಢದಲಿ ತಿಳಿದುನೋಡಿ ಮಡಿ ನೀರೊಳಗೆ ಇಲ್ಲ |
ಮಡಿ ದೇಶದೊಳಗಿಲ್ಲ ಮಡಿ ವಸನದೊಳಗಿಲ್ಲ |
ಮಡಿ ನಭದಲ್ಲಿ ಇಲ್ಲ ಮಡಿ ಮಾಡೊ ಉಪಾಯವ |
ವೊಡನೆ ತನ್ನಲಿ ಉಂಟು ಪೊಡವಿ ತಿರುಗಲು ಸಲ್ಲ |
ಅಡಿಗಡಿಗೆ ದಣಿವುದಲ್ಲ ಅಡಿಗಳಿಟ್ಟು ನೋಡಿ |
ನಡೆದರೆ ಮಡಿಯಲ್ಲ ಮಡಿಯಾಪ್ಪನೆಂದು ಉಡಿಗೆ ಮುದುರಿಕೊಂಡು
ಅಡಿ‌ಅಡಿಗ್‌ಹಾರಿದರೆ ಮಡಿಯಾಗುವುದೇನೋ |
ಕಡು ಮುದ್ದು ಮೋಹನ ವಿಜಯ ವಿಟ್ಠಲನ್ನ |
ಅಡಿಗೆರಗದವನ ಮಡಿಯಾತಕ್ಕೆ ಒಪ್ಪದೊ || ೧ ||

ಮಟ್ಟತಾಳ

ಕಾಮಕ್ರೋಧದಲಿ ತಿರುಗಲು ಮಡಿ ಅಲ್ಲ |
ಕಾಮನ ಬಳಗಕ್ಕೆ ಸೋಲಲು ಮಡಿಯಲ್ಲ |
ತಾಮಸ ವೃತ್ತಿಯಲಿ ಇದ್ದರೆ ಮಡಿಯಲ್ಲ |
ಹೇಮದ ಬಯಕೆಯಲಿ ಚರಿಸಲು ಮಡಿಯಲ್ಲ |
ಯಾಮ ಯಾಮಕ್ಕೆ ಹರಿಯ ಮರೆತರೆ ಮಡಿಯಲ್ಲ |
ನಾಮವ ಧರಿಸಿದ್ದರೆ ಅದು ಮಡಿ ಅಲ್ಲ |
ನೇಮ ನಿತ್ಯಗಳ ತೊರೆತರೆ ಅದು ಮಡಿ ಅಲ್ಲ |
ಭೂಮಿ ಪಾಲಕ ನಮ್ಮ ವಿಜಯವಿಟ್ಠಲರೇಯನ |
ನಾಮವನು ಮರೆದವನು ಎಂದಿಗೂ ಮಡಿಯಲ್ಲ || ೨ ||

ತ್ರಿವಿದಿತಾಳ

ಹಸುವ ಕಾಲಲಿ ಒದೆದರೆ ಮಡಿಯಲ್ಲ |
ಹಸು ಮಕ್ಕಳ ನೂಕಿ ಬಿಟ್ಟರೆ ಮಡಿಯಲ್ಲ |
ವಶಳಾದ ನಾರಿಯ ತೊರೆದರೆ ಮಡಿಯಲ್ಲ |
ವಸುಧಿ ಸುರರ ಕಂಡು ಬೈದರೆ ಮಡಿಯಲ್ಲ |
ವಿಷವಿಕ್ಕಿ ಜನರ ಕೊಂದರೆ ಮಡಿಯಲ್ಲ |
ನಿಶೆಯಲಿ ಉಂಡವನು ಎಂದಿಗೂ ಮಡಿಯಲ್ಲ |
ಅಸೂಯೆ ಬಟ್ಟುಕೊಂಡರೆ ಅದು ಮಡಿಯಲ್ಲ |
ಅಶನಘಾತಕವಾಗಿ ಇದ್ದವನು ಮಡಿಯಲ್ಲ |
ದಶಮಿ ದ್ವಾದಶಿ ಕನ್ಯಾದಾನವು ಮಡಿಯಲ್ಲ |
ಕುಶಲ ಮೂರುತಿ ನಮ್ಮ ವಿಜಯವಿಟ್ಠಲರೇಯನ |
ಬೆಸನ ಭಕುತಿಯ ಬೇಡದಿದ್ದರೆ ಮಡಿಯಲ್ಲ || ೩ ||

ಅಟ್ಟತಾಳ

ಸಕೇಶಿ ಕೈಯಿಂದ ಉಂಡರೆ ಮಡಿಯಲ್ಲ |
ಸಿಕ್ಕಿದವರ ಬಳಲಿಸಿದರೆ ಮಡಿಯಲ್ಲ |
ವಾಕುಬದ್ಧವಿಲ್ಲದವನಿಗೆ ಮಡಿಯಲ್ಲ |
ಶ್ರೀಕಾಂತನ ಸ್ಮರಣೆ ಮರೆತರೆ ಮಡಿಯಲ್ಲ |
ಏಕಾಂತ ಧ್ಯಾನವು ಇಲ್ಲದೆ ಮಡಿಯಲ್ಲ |
ಪಾಕಶಾಸನ ವಂದ್ಯ ವಿಜಯವಿಟ್ಠಲರೇಯನು |
ಸಾಕುವನೆನ್ನದಿದ್ದರೆ ಅದು ಮಡಿಯಲ್ಲ || ೪ ||

ಆದಿತಾಳ

ಗುರುಗಳಿಗೆ ನಮಿಸದಿದ್ದರೆ ಅದು ಮಡಿಯಲ್ಲ |
ದುರುಳ ಜನರ ಸಂಗವಿದ್ದರೆ ಮಡಿಯಲ್ಲ |
ಕರೆಕರೆ ಸತಿಯಿಂದ ದಾನಾದಿಗೆ ಮಡಿಯಲ್ಲ |
ತರಣಿಯ ದೃಷ್ಟಿಸೇ ಕೇವಲ ಮಡಿಯಲ್ಲ |
ಪರಮಶುದ್ಧ ನಮ್ಮ ವಿಜಯವಿಟ್ಠಲನ |
ಚರಣದಲಿ ರತಿ ಇಲ್ಲದಲೆ ಮಡಿ ಅಲ್ಲ || ೫ ||

ಜತೆ
ಕೋಪದವನ ಸಂಗಡದಲಿರೆ ಮಡಿಯಲ್ಲ |
ಶ್ರೀಪತಿ ವಿಜಯವಿಟ್ಠಲನೊಲಿಯದಿರೆ ಮಡಿಯಲ್ಲ || ೬ ||

 

Dhruva tala
Madi maduvado manava nadati nudati tilidu
Bidade pratidina mirmaladi madi, nirolage ogedu
Madisi bagebageyinda madaki hakittare madiyalla |
Dhrudhadali tilidunodi madi nirolage illa |
Madi desadolagilla madi vasanadolagilla |
Madi nabadalli illa madi mado upayava |
Vodane tannali untu podavi tirugalu salla |
Adigadige danivudalla adigalittu nodi |
Nadedare madiyalla madiyappanendu udige mudurikondu
Adi^^adig^^haridare madiyaguvudeno |
Kadu muddu mohana vijaya vitthalanna |
Adigeragadavana madiyatakke oppado || 1 ||

Matta tala
Kamakrodhadali tirugalu madi alla |
Kamana balagakke solalu madiyalla |
Tamasa vruttiyali iddare madiyalla |
Hemada bayakeyali charisalu madiyalla |
Yama yamakke hariya maretare madiyalla |
Namava dharisiddare adu madi alla |
Nema nityagala toretare adu madi alla |
Bumi palaka namma vijayavitthalareyana |
Namavanu maredavanu endigu madiyalla || 2 ||

Trividi tala
Hasuva kalali odedare madiyalla |
Hasu makkala nuki bittare madiyalla |
Vasalada nariya toredare madiyalla |
Vasudhi surara kandu baidare madiyalla |
Vishavikki janara kondare madiyalla |
Niseyali undavanu endigu madiyalla |
Asuye battukomdare adu madiyalla |
Asanagatakavagi iddavanu madiyalla |
Dasami dvadasi kanyadanavu madiyalla |
Kusala muruti namma vijayavitthalareyana |
Besana Bakutiya bedadiddare madiyalla || 3 ||

Atta tala
Sakesi kaiyinda undare madiyalla |
Sikkidavara balalisidare madiyalla |
Vakubaddhavilladavanige madiyalla |
Srikantana smarane maretare madiyalla |
Ekamta dhyanavu illade madiyalla |
Pakasasana vandya vijayavitthalareyanu |
Sakuvanennadiddare adu madiyalla || 4 ||

Adi tala
Gurugalige namisadiddare adu madiyalla |
Durula janara sangaviddare madiyalla |
Karekare satiyinda danadige madiyalla |
Taraniya drushtise kevala madiyalla |
Paramasuddha namma vijayavitthalana |
Charanadali rati illadale madi alla || 5 ||

Jate
Kopadavana sangadadalire madiyalla |
Sripati vijayavitthalanoliyadire madiyalla || 6 ||

3 thoughts on “Madi suladi

Leave a comment