dasara padagalu · MADHWA

Puje yatako

ಪೂಜೆ ಯಾತಕೋ, ಮನುಜ
ಪೂಜೆ ಯಾತಕೋ ||ಪ |||
ಪೂಜೆಯಲಿ ನಿನ್ನ ಮನ
ನಿಲ್ಲದಿದ್ದ ಮೇಲೆ ನಿನಗೆ ||ಅ ||

ಭೂತದಯಾ ಪಶ್ಚಾತ್ತಾಪ
ನೀತಿಯೆಂಬುದು ಮತ್ತಿಲ್ಲ
ಮಾತಿನಲಿ ಜ್ಞಾನಿಯಲ್ಲ
ಕೋತಿ ಬುದ್ಧಿ ಬಿಡಲಿಲ್ಲ ||

ಹಾಕುವುದು ಸಾಧುವೇಷ
ಸಾಕುವುದು ಹಲವು ದೋಷ
ಬೇಕೇ ನಿನಗೆ ಒಳ್ಳೆ ಪದ
ಏಕೆ ಭ್ರಾಂತಿ ಉನ್ಮತ್ತ ||

ಪೂಜೆಯಲ್ಲಿ ಹೊಲೆಯನಿಸಿ
ಜಾಜಿ ತುಳಸಿ ಕೈಯಲಿ
ಮೂರ್ಜಗದೊಡೆಯ ಅವನು ಎಲ್ಲಿ
ಮಾರ್ಜಾಲನಂತೆ ನೋಡದಲಿ ||

ಆಸೆಯನು ಬಿಡಲಿಲ್ಲ
ಶೇಷಶಯನನ ಪೂಜೆಯೆಲ್ಲ
ಗಾಸಿಬಟ್ಟು ಮಾಡುತಿಯಲ್ಲ
ಮೋಸ ಹೋಗದೆ ತಿಳಿಯೊ ಎಲ್ಲ ||

ತಂದೆ ಪುರಂದರವಿಠಲನ
ಒಂದೆ ಮನದಿ ನೆನೆ ಅಣ್ಣಯ್ಯ
ಎಂದು ಕುಂದದ ಪದವನೀವ
ನಂದ ನಂದನ ತಂದೆ ಕೃಷ್ಣ ||

Puje yatako manuja puje yatako||p||

Pujeyali ninna mana nilladidda mele ninage||a||

Bhutadaya pashcattapa nitiyembudu mattilla
Matinali jnaniyalla koti buddhi bidalilla||1||

Hakuvudu sadhu vesa sakuvudu halavu dosa
Beke ninage olle pada eke bhranti unmatta||2||

Pujeyalli holeyanisi jaji tulasi kaiyali
Mujagadodeya avanu elli marjalanante nodadali||3||

Aseyanu bidalilla shesashayana pujeyalla
Gasipattu madutiyalla mosa hogade tiliyo ella

Tande purandara vittalanaonde manadi nene annayya
Endu kundada padavaniva nanda nandana tande krsna

5 thoughts on “Puje yatako

Leave a comment