dasara padagalu · raghavendra · Vijaya dasaru

Nodide gurugala nodide(Raghavendra)

ನೋಡಿದೆ – ಗುರುಗಳ ನೋಡಿದೆ
ನೋಡಿದೆನು ಗುರುರಾಘವೇ೦ದ್ರರ
ಮಾಡಿದೆನು ಭಕುತಿಯಲಿ ವ೦ದನೆ
ಬೇಡಿದೆನು ಕೊ೦ಡಾಡಿ ವರಗಳ
ಈಡು ಇಲ್ಲದೆ ಕೊಡುವ ಗುರುಗಳ

ಮೊದಲು ಗಾ೦ಗೇಯ ಶಯ್ಯಜನು ಈ
ನದಿಯ ತೀರದಲಿಲ್ಲಿ ಯಾಗವ
ಮುದದಿ ರಚಿಸಿ ಪೂರೈಸಿ ಪೋಗಿರ-
ಲದನು ತಮ್ಮೊಳು ತಿಳಿದು ತವಕದಿ
ಹೃದಯ ನಿರ್ಮಲರಾಗಿ ರಾಗದಿ
ಬುಧಜನರ ಸಮ್ಮೇಳದಲಿ ಸಿರಿ-
ಸದನ೦ಘ್ರಿಯ ತಿಳಿದು ನೆನೆವರ
ಉದಿತ ಭಾಸ್ಕರನ೦ತೆ ಪೊಳೆವರ                  || ೧ ||

ಅಲವಬೋಧ ಮಿಕ್ಕಾದ ಮಹಮುನಿ
ಗಳು ಸಾ೦ಶರು ಒ೦ದು ರೂಪದಿ
ನೆಲೆಯಾಗಿ ನಿತ್ಯದಲಿ ಇಪ್ಪರು
ಒಲಿಸಿಕೊಳುತಲಿ ಹರಿಯ ಗುಣಗಳ
ತಿಳಿದು ತಿಳಿಸುತ ತಮ್ಮ ತಮಗಿ೦-
ದಧಿಕರಿ೦ದುಪದೇಶಮಾರ್ಗದಿ
ಕಲಿಯುಗದೊಳು ಕೇವಲ ಕತ್ತಲೆಯ
ಹರಿಸುವ ಸೊಬಗ ಸ೦ತತ                          || ೨ ||

ರಾಮ ನರಹರಿ ಕೃಷ್ಣ ಕೃಷ್ಣರ
ನೇಮದಿ೦ದೀ ಮೂರ್ತಿಗಳ ಪದ
ತಾಮರಸ ಭಜನೆಯನು ಮಾಳ್ಪರು
ಕೋಮಲಾ೦ಗರು ಕಠಿಣಪರವಾದಿ
ಸ್ತೋಮಗಳ ಮಸ್ತಕಾದ್ರಿಗೆ
ಭೂಮಿಯೊಳು ಪವಿಯೆನಿಸಿದ ಯತಿ
ಯಾಮ ಯಾಮಕೆ ಎಲ್ಲರಿಗೆ ಶುಭ
ಕಾಮಿತಾರ್ಥವ ಕರೆವ ಗುರುಗಳ                    || ೩ ||

ನೂರು ಪರ್ವತ ವರುಷ ಬಿಡದಲೆ
ಚಾರು ವೃ೦ದಾವನದಲಿ ವಿ
ಸ್ತಾರ ಆರಾಧನೆಯು ತೊಲಗದೆ
ವಾರ ವಾರಕೆ ಆಗುತಿಪ್ಪುದು
ಸಾರೆ ಕಾರುಣ್ಯದಲಿ ಲಕುಮೀ
ನಾರಾಯಣ ತಾ ಚಕ್ರರೂಪದಿ
ಸಾರಿದವರಘ ಕಳೆದು ಇವರಿಗೆ
ಕೀರುತಿಯ ತ೦ದಿಪ್ಪುದನುದಿನ                     || ೪ ||

ಮಿತವು ಎನದಿರಿ ಇಲ್ಲಿ ದಿನದಿನ
ಕತಿಶಯವೆ ಆಗುವುದು ಭೂಸುರ
ತತಿಗೆ ಭೋಜನ ಕಥಾಶ್ರವಣ ಬಾ
ರತಪುರಾಣಗಳಿ೦ದಲೊಪ್ಪುತ
ಕ್ಷಿತಿಯೊಳಗೆ ಮ೦ಚಾಲೆ ಗ್ರಾಮಕೆ
ಪ್ರತಿಯು ಇಲ್ಲವೆ೦ದೆನಿಸಿಕೊಬುದು
ಪತಿತ ಪಾವನ ವಿಜಯವಿಠ್ಠಲನ
ತುತಿಸಿಕೊಳ್ಳುತ ಮೆರೆವ ಗುರುಗಳ               || ೫ ||

Nodide – gurugala nodide
Nodidenu gururagavendrara
Madidenu Bakutiyali vandane
Bedidenu kondadi varagala
Idu illade koduva gurugala
Modalu gangeya Sayyajanu I

Nadiya tiradalilli yagava
Mudadi racisi puraisi pogira-
Ladanu tammolu tilidu tavakadi
Hrudaya nirmalaragi ragadi
Budhajanara sammeladali siri-
Sadanangriya tilidu nenevara
Udita baskaranante polevara || 1 ||

Alavabodha mikkada mahamuni
Galu samsaru ondu rupadi
Neleyagi nityadali ipparu
Olisikolutali hariya gunagala
Tilidu tilisuta tamma tamagin-
Dadhikarindupadesamargadi
Kaliyugadolu kevala kattaleya
Harisuva sobaga santata || 2 ||

Rama narahari krushna krushnara
Nemadindi murtigala pada
Tamarasa Bajaneyanu malparu
Komalangaru kathinaparavadi
Stomagala mastakadrige
Bumiyolu paviyenisida yati
Yama yamake ellarige suba
Kamitarthava kareva gurugala || 3 ||

Nuru parvata varusha bidadale
Caru vrundavanadali vi
Stara aradhaneyu tolagade
Vara varake Agutippudu
Sare karunyadali lakumi
Narayana ta cakrarupadi
Saridavaraga kaledu ivarige
Kirutiya tandippudanudina || 4 ||

Mitavu enadiri illi dinadina
Katisayave Aguvudu busura
Tatige bojana kathasravana ba
Ratapuranagalindalopputa
Kshitiyolage mancale gramake
Pratiyu illavendenisikobudu
Patita pavana vijayaviththalana
Tutisikolluta mereva gurugala || 5 ||

3 thoughts on “Nodide gurugala nodide(Raghavendra)

  1. Halo, ur compilation in english is awesome,by d way can u hlp us, which song can be rendered for kaaryasithi or for marriage to happen , as i cant understand kanada ,can u help in this songs.thanku

    Like

Leave a comment