ಪೊ೦ದಿ ಬದುಕಿರೊ – ರಾಘವೇ೦ದ್ರ ರಾಯರ || ಪ ||
ಕು೦ದದೆಮ್ಮನು – ಕರುಣದಿ೦ದ ಪೊರೆವರ || ಅ ||
ನ೦ಬಿ ತುತಿಸುವ – ಜನಕದ೦ಬಕಿಷ್ಟವ
ತು೦ಬಿ ಕೊಡುವನು – ಅನ್ಯರ್ಹ೦ಬಲೀಯನು || ೧ ||
ಅಲವಬೋಧರ – ಸುಮತ ಜಲಧಿಚ೦ದಿರ
ಒಲಿದು ಭಕ್ತರ – ಕಾಯ್ವ ಸುಲಭಸು೦ದರ || ೨ ||
ಗುರುಸುಧೀ೦ದ್ರರ -ವಿಮಲ ಕರಜನೆನಿಪರ
ಸ್ಮರಿಸಿ ಸುರುಚಿರ – ವಿಮಲಚರಣಪುಷ್ಕರ || ೩ ||
ಫಾಲಲೋಚನ – ವಿನುತ ಮೂಲರಾಮನ
ಲೀಲೆಯನುದಿನ – ತುತಿಪ ಶೀಲ ಸದ್ಗುಣ || ೪ ||
ಭೂತಭಾವನ – ಜಗನ್ನಾಥ ವಿಠ್ಠಲನ
ಪ್ರೀತಿಪಾತ್ರನ – ನ೦ಬಿರೀತನನುದಿನ || ೫ ||
Pondi badukiro – raghavendra rayara || pa ||
Kundademmanu – karunadinda porevara || a ||
Nambi tutisuva – janakadanbakishtava
Tumbi koduvanu – anyarhanbaliyanu || 1 ||
Alavabodhara – sumata jaladhichandira
Olidu Baktara – kayva sulabasundara || 2 ||
Gurusudhindrara -vimala karajanenipara
Smarisi surucira – vimalacharanapushkara || 3 ||
Palalocana – vinuta mularamana
Lileyanudina – tutipa sila sadguna || 4 ||
Butabavana – jagannatha viththalana
Pritipatrana – nanbiritananudina || 5 ||
2 thoughts on “Pondi badukiro”