dasara padagalu · helavanakatte giriyamma · MADHWA · rama

Rama sri ragunandana saranu

ರಾಮ ಶ್ರೀ ರಘುನಂದನ ಶರಣು ಸಾರ್ವ-
ಭೌಮ ಭೂಸುರವಂದ್ಯ
ಸೋಮಶೇಖರಮಿತ್ರ ಕಾಮಿತ ಫಲದಾತ್ರ
ಕಾಮಧೇನು ವಿಶ್ವಭೀಮ ಸನ್ನುತ ಸೀತಾ ||pa||

ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ-
ಭಾರಹರ ಭಜಕÀಜನೋದ್ಧಾರ ವೇದಾಂತಸಾರ
ಚಾರುವದನ ಮಣಿಹಾರ ಕುಂಡಲಧರ
ವೀರರಾಘವ ವಿಶ್ವಾಧಾರ ಕರುಣಿಸು ಸೀತಾ ||1||

ಪಾಪರಹಿತ ಪಾವನ ಚರಿತ ಅಹಲ್ಯಾ
ಶಾಪ ಹರಣ ದಿವ್ಯರೂಪ ರಮಾರಮಣ
ತಾಪ ವಿಚ್ಛೇದನ ತಾಮಸ ಗುಣಹರಣ ದ-
ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ ||2||

ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ
ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ
ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ||3||

Rama sri ragunandana saranu | sarva |
Bauma busura vandya || pa ||

Somasekara mitra kamita paladata |
Kamadhenu visva bima sannuta sita || A. Pa ||

Krura danava samhara kausalya kumara | BU |
Bara hara Bajaka janoddhara vedantasara |
Caruvadana mani hara kundaladhara |
Vira ragava visvadhara karunisu sita || 1 ||

Papa rahita pavana carita ahalya |
Sapa harana divya rupa ramaramana |
Tapa viccedana tamasa guna harana | da |
Ya parabrahma svarupa muruti sita || 2 ||

Madanakoti mohananga madhava punyacharita |
Karunapamga helavanakatte rangayya |
Sadanamda sumatimdra |hrudayabja brunga |
Kadana vikrama bahu kodandadhruta sita || 3 ||

2 thoughts on “Rama sri ragunandana saranu

Leave a comment