dasara padagalu · kesava nama · MADHWA · Vadirajaru

Keshava Jagadheesa Saasira baasura

ಕೇಶವ ಜಗದೀಶ ಸಾಸಿರಭಾಸುರಕೋಟಿಸಂಕಾಶ
ವಾಸವಾದಿಗಳ ವಂದ್ಯ ಸೀತಾಪತೆ ||1||

ನಾರಾಯಣ ಸಕಲವೇದಪಾರಾಯಣ ಕೃಷ್ಣ
ನಾರದಾದಿಗಳ ವಂದ್ಯ ಸೀತಾಪತೆ ||2||

ಮಾಧವ ಮಂಗಳಗಾತ್ರ ವೇದವನ್ನೆ ಕದ್ದು ಒಯ್ದ
ಆ ಖಳನ ಕೊಂದೆ ಸೀತಾಪತೆ ||3||

ಗೋವಿಂದ ಗೋಕುಲಬಾಲ ಗೋಪಿಯರ ಮನೋಹರ
ಆದಿ ಕೂರ್ಮಾವತಾರ ಸೀತಾಪತೆ ||4||

ವಿಷ್ಣುವೆ ಯತಿಗಳ ವಂದ್ಯ ಅಷ್ಟಲಕ್ಷ್ಮಿಯರ ನಾಥ
ದಿಟ್ಟ ವàರಾಹರೂಪನಾದ ಸೀತಾಪತೆ ||5||

ಮಧುಸೂಧನ ಮಾವನ ವೈರಿ ಯದುಕುಲಕ್ಕೆ ತಿಲಕನಾದ
ಚೆಲುವನಾದ ಹರಿ ನೀನೆ ಸೀತಾಪತೆ ||6||

ತ್ರಿವಿಕ್ರಮರೂಪನಾಗಿ ತ್ರಿಜಗವನ್ನೆ ಪಾಲಿಸಿದ
ವಾಮನರೂಪಿ ನೀನೆ ಸೀತಾಪತೆ||7||

ವಾಮನರೂಪವ ತಾಳಿ ಆ ಮಹಾಬಲಿಯನ್ನೆ ತುಳಿದು
ನೇಮದಿ ಕ್ಷತ್ರೇರ ಕೊಂದ ಸೀತಾಪತೆ||8||

ಶ್ರೀಧರ ನೀನೆಂದೆನಿಸಿ ಶೋಷಿಸಿ ಖಳg àನೆಲ್ಲ
ಜಾನಕಿಯ ತàಂದ ರಾಮ ಸೀತಾಪತೆ ||9||

ಹೃಷೀಕೇಶ ನೀನೆಂದು ಋಷಿಗಳು ಸ್ತುತಿಯ ಮಾಡಿ
ವಸುದೇವಸುತ ಕೃಷ್ಣ ಸೀತಾಪತೆ ||10||

ಪದ್ಮನಾಭನೆಂದು ವೇದ ಸಿದ್ಧವಾಗಿ ಪೊಗಳುತಿಧೆ
ಬುದ್ಧಾವತಾರ ಕೃಷ್ಣ ಸೀತಾಪತೆ ||11||
ದಾಮೋದರನೆಂದು ನಿಮ್ಮ ದೇವತೆಗಳೆಲ್ಲ ಕರೆಯೆ
ಆ ಮಹಾ ಕಲ್ಕ್ಯ್ಕನಾದ ಸೀತಾಪತೆ||12||

ಸಂಕರುಷಣ ದೇವ ನಿಮ್ಮ ಕಿಂಕರರು ನಾವೆಲ್ಲರಯ್ಯ
ಪಂಕಜಾಸನವಂದ್ಯ ರಾಮ ಸೀತಾಪತೆ ||13||

ವಾಸುದೇವ ನಿಮ್ಮ ಪಾದಕ್ಕೆ ವಂದನೆಯ ಮಾಡುವೆನಯ್ಯ
ದೋಷರಾಶಿ ನಾಶಮಾಡು ಸೀತಾಪತೆ ||14||

ಪ್ರದ್ಯುಮ್ನನೆಂದು ಸುರರು ಎದ್ದು ನಿನ್ನೆ ಪೊಗಳುತ್ತಿರೆ
ಉದ್ಧಾರ ಮಾಡಿದ ದೇವ ಸೀತಾಪತೆ ||15||

ಅನಿರುದ್ಧನೇ ಗತಿಯೆಂದು ಅನುದಿನ ನಿನ್ನ ಕರೆಯೆ
ಅನಿಮಿತ್ತಬಂಧು ಕೃಷ್ಣ ಸೀತಾಪತೆ ||16||

ಪುರುಷೋತ್ತಮ ಪುಣ್ಯ ನಾಮ ಸ್ಮರಿಸುವ ಜನರ
ಮನೋಹರುಷ ನೀಡಿದ ರಾಮ ಸೀತಾಪತೆ ||17||

ಅಧೋಕ್ಷಜ ಲೋಕಗಳಿಗೆ ಆಧಾರಭೂತನಾ ಗಿರುವೆ
ವೇದವೇದ್ಯರಾಮ ಸೀತಾಪತೆ ||18||

ನಾರಸಿಂಹ ನರನಿಗೆ ವೇದ ಗೀತೆಗಳನೆಲ್ಲ
ಬೋಧನೆಯನ್ನು ಮಾಡಿದ ಸೀತಾಪತೆ ||19||

ಅಚ್ಯುತ ವಿಶ್ವಾಮಿತ್ರ ಅತಿಶಯ ಯಾಗವ ಕಾಯ್ದ
ಭಕ್ತವತ್ಸಲ ರಾಮ ಸೀತಾಪತೆ ||20||

ಜನಾರ್ದನರೂಪನಾಗಿ ಜಾನಕಿಯ ತಂದ
ಜಾಹ್ನವೀಜನಕ ರಾಮ ಸೀತಾಪತೆ ||21||

ಉಪೇಂದ್ರನೆ ಉದ್ಧವಗೆ ಉಪದೇಶವನೆ ಮಾಡಿ
ಅಪರಿಮಿತಪದವಿ ಕೊಟ್ಟ ಸೀತಾಪತೆ ||22||

ಹರಿ ಹರಿಯೇ ರಕ್ಷಿಸೆಂದು ಹಲವು ಕಾಲ ತಪವ ಮಾಡಿ
ಚರಿಸುವರಿಗೆ ಮೋಕ್ಷವಿತ್ತೆ ಸೀತಾಪತೆ ||23||

ರಕ್ಷಿಸಯ್ಯ ಕೃಷ್ಣ ರಾಮ ರಕ್ಷಿಸಯ್ಯ ಹಯವದನ
ಪಕ್ಷಿವಾಹನ ರಾಮ ಸೀತಾಪತೆ ||24||


Kesava jagadisa sasirabasurakotisankasa
Vasavadigala vamdya sitapate ||1||

Narayana sakalavedaparayana krushna
Naradadigala vandya sitapate ||2||

Madhava mangalagatra vedavanne kaddu oyda
A kalana konde sitapate ||3||

Govinda gokulabala gopiyara manohara
Adi kurmavatara sitapate ||4||

Vishnuve yatigala vandya ashtalakshmiyara natha
Ditta vaàraharupanada sitapate ||5||

Madhusudhana mavana vairi yadukulakke tilakanada
Celuvanada hari nine sitapate ||6||

Trivikramarupanagi trijagavanne palisida
Vamanarupi nine sitapate||7||

Vamanarupava tali a mahabaliyanne tulidu
Nemadi kshatrera konda sitapate||8||

Sridhara ninemdenisi soshisi kalag ànella
Janakiya tanda rama sitapate ||9||

Hrushikesa ninendu rushigalu stutiya madi
Vasudevasuta krushna sitapate ||10||

Padmanabanendu veda siddhavagi pogalutidhe
Buddhavatara krushna sitapate ||11||

Damodaranendu nimma devategalella kareye
A maha kalkykanada sitapate||12||

Sankarushana deva nimma kimkararu navellarayya
Pankajasanavandya rama sitapate ||13||

Vasudeva nimma padakke vandaneya maduvenayya
Dosharasi nasamadu sitapate ||14||

Pradyumnanendu suraru eddu ninne pogaluttire
Uddhara madida deva sitapate ||15||

Aniruddhane gatiyendu anudina ninna kareye
Animittabandhu krushna sitapate ||16||

Purushottama punya nama smarisuva janara
Manoharusha nidida rama sitapate ||17||

Adhokshaja lokagalige adharabutana giruve
Vedavedyarama sitapate ||18||

Narasimha naranige veda gitegalanella
Bodhaneyannu madida sitapate ||19||

Acyuta visvamitra atisaya yagava kayda
Baktavatsala rama sitapate ||20||

Janardanarupanagi janakiya tanda
Jahnavijanaka rama sitapate ||21||

Upendrane uddhavage upadesavane madi
Aparimitapadavi kotta sitapate ||22||

Hari hariye rakshisendu halavu kala tapava madi
Charisuvarige mokshavitte sitapate ||23||

Rakshisayya krushna rama rakshisayya hayavadana
Pakshivahana rama sitapate ||24||

3 thoughts on “Keshava Jagadheesa Saasira baasura

Leave a comment