dasara padagalu · MADHWA · purandara dasaru

Madhvarayara devatarcaneya

ಮಧ್ವರಾಯರ ದೇವತಾರ್ಚನೆಯ ||ಪ||
ಪ್ರಸಿದ್ಧ ರಘುನಾಥರು ಪೂಜಿಸುವ ಸೊಬಗಿನ ||ಅ||

ಮೂಲ ರಘುಪತಿ ಒಂದು ಮುದ್ದು ಜಾನಕಿ ಒಂದು
ಲೀಲೆ ದಿಗ್ವಿಜಯ ರಾಮಮೂರ್ತಿ ಒಂದು
ಶಾಲಗ್ರಾಮ ಹಯಗ್ರೀವ ಮೊದಲಾದುವು ನಾಲ್ಕು
ಚೆಲುವಸುದರ್ಶನಗಳೆರಡು ಚಕ್ರಾಂಕಿತಗಳೈದು ||1||

ಅಭಿಷೇಕಶಂಖ ಒಂದು ಅಕ್ಷಯ ಪಾತೆಯು ಒಂದು
ಶುಭನಿಧಿಯ ಬಲಮುರಿ ಶಂಖ ಒಂದು
ಉಭಯ ಪಶ್ಚಿಮಧೇನ ಒಂದು ಉತ್ತಮವಾದ ಮುದ್ರೆ ಒಂದು
ಚಕ್ರಾಂಕಿತಗಳೆರಡು ಬಾಣವೆರಡು ||2||

ವೇದವ್ಯಾಸಮೂರ್ತಿ ನಾಲ್ಕು ಕ್ಷೀರದಿ ಲೋಲಾಡುವ ಕೂರ್ಮ ಒಂದು
ಸ್ಮರಿಸಿ ಇಪ್ಪತ್ತೆಂಟು ಮೂರುತಿಗಳನು
ಪುರಂದರವಿಠಲನ್ನ ಪೂರ್ಣ ಭಕ್ತರೆಂಬ
ಈ ರಘುನಾಥ ತೀರ್ಥರು ಎಷ್ಟು ಪುಣ್ಯವಂತರೊ ||3||

Madhvarayara devatarcaneya ||pa||

Prasiddha raghunatharu pujisuva sobagina ||a||

Mula ragupati ondu muddu janaki ondu
Lile digvijaya ramamurti ondu
Salagrama hayagriva modaladuvu nalku
Cheluvasudarsanagaleradu chakrankitagalaidu ||1||

Abishekasanka omdu akshaya pateyu ondu
Subanidhiya balamuri sanka ondu
Ubaya pascimadhena ondu uttamavada mudre ondu
Cakrankitagaleradu banaveradu ||2||

Vedavyasamurti nalku kshiradi loladuva kurma ondu
Smarisi ippattentu murutigalanu
Purandaravithalanna purna baktaremba
I raghunatha tirtharu eshtu punyavantaro ||3||

One thought on “Madhvarayara devatarcaneya

Leave a comment