dasara padagalu · MADHWA · purandara dasaru

Guruvina gulamanaguva

ಗುರುವಿನ ಗುಲಾಮನಾಗುವ ತನಕ
ದೊರಕದಣ್ಣ ಮುಕುತಿ ||pa||

ಪರಿಪರಿಶಾಸ್ತ್ರವನೇಕವನೋದಿ
ವ್ಯರ್ಥವಾಯಿತು ಭಕುತಿ||apa||

ಆರು ಶಾಸ್ತ್ರವನೋದಿದರಿಲ್ಲ ಮೂ-
ರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ
ಧೀರನಾಗಿ ತಾ ಮೆರೆದರೆ ಇಲ್ಲ||1||

ಕೊರಳೊಳು ಮಾಲೆಯ ಧರಿಸಿದರಿಲ್ಲ
ಬೆರಳೊಳು ಜಪಮಣಿ ಎಣಿಸಿದರಿಲ್ಲ
ಮರುಳನಂತೆ ಶರೀರಕೆ ಬೂದಿಯ
ಒರಸಿಕೊಂಡು ತಾ ತಿರುಗಿದರಿಲ್ಲ||2||

ನಾರಿಯ ಭೋಗ ಅಳಿಸಿದರಿಲ್ಲ
ಶರೀರಕೆ ಸುಖವ ಬಿಡಿಸಿದರಿಲ್ಲ
ನಾರದ ವರದ ಶ್ರೀ ಪುರಂದರವಿಠಲನ
ಮರೆಯದೆ ಮನದೊಳು ಬೆರೆಯುವ ತನಕ||3||

Guruvina gulamanaguva tanaka
Dorakadanna mukuti ||pa||

Pariparisastravanekavanodi
Vyarthavayitu Bakuti||apa||

Aru sastravanodidarilla mu-
Raru puranava mugisidarilla
Sari sajjanara sangava madade
Dhiranagi ta meredare illa||1||

Koralolu maleya dharisidarilla
Beralolu japamani enisidarilla
Marulanamte sarirake budiya
Orasikondu ta tirugidarilla||2||

Nariya boga alisidarilla
Sarirake sukava bidisidarilla
Narada varada sri purandaravithalana
Mareyade manadolu bereyuva tanaka||3||

One thought on “Guruvina gulamanaguva

Leave a comment