dasara padagalu · MADHWA · purandara dasaru

Acharavillada nalige ninna

ಆಚಾರವಿಲ್ಲದ ನಾಲಿಗೆ ನಿನ್ನ
ನೀಚ ಬುದ್ಧಿಯ ಬಿಡು ನಾಲಿಗೆ||pa||

ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ
ಚಾಚಿಕೊಂಡಿರುವಂತ ನಾಲಿಗೆ||a.pa||

ಪ್ರಾತಃಕಾಲದೊಳೆದ್ದು ನಾಲಿಗೆ ಸಿರಿ-
ಪತಿಯೆನ್ನಬಾರದೆ ನಾಲಿಗೆ
ಪತಿತ ಪಾವನ ನಮ್ಮ ರತಿಪತಿ ಜನಕನ
ಸತತವು ನುಡಿ ಕಂಡ್ಯ ನಾಲಿಗೆ||1||

ಚಾಡಿ ಹೇಳಲಿಬೇಡ ನಾಲಿಗೆ ನಿನ್ನ
ಬೇಡಿಕೊಂಬುವೆನು ನಾಲಿಗೆ
ರೂಢಿಗೊಡಯ ಶ್ರೀರಾಮನ ನಾಮವ
ಪಾಡುತಲಿರು ಕಂಡ್ಯ ನಾಲಿಗೆ||2||

ಹರಿಯ ಸ್ಮರಣೆ ಮಾಡು ನಾಲಿಗೆ ನರ-
ಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರವಿಟ್ಠಲರಾಯನ
ಚರಣಕಮಲವ ನೆನೆ ನಾಲಿಗೆ||3||

Acaravillada nalige ninna
Nica buddhiya bidu nalige||pa||

Vicaravillade parara dushisuvudakke
Cacikondiruvanta nalige||a.pa||

Pratahkaladoleddu nalige siri-
Patiyennabarade nalige
Patita pavana namma ratipati janakana
Satatavu nudi kandya nalige||1||

Cadi helalibeda nalige ninna
Bedikombuvenu nalige
Rudhigodaya sriramana namava
Padutaliru kandya nalige||2||

Hariya smarane madu nalige nara-
Hariya Bajisu kandya nalige
Varada purandaravitthalarayana
Charanakamalava nene nalige||3||

2 thoughts on “Acharavillada nalige ninna

Leave a comment