dasara padagalu · MADHWA · purandara dasaru

Ena pelale gopi ninna magana

ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ
ಮಾನ ತಪ್ಪಿ ಬಂದ ಮನೆಯೊಳಗೆ ||pa||

ಕೊಡ ಹಾಲು ಕುಡಿದನೆ ಗಡಿಗೆಯ ಒಡೆದನೆ
ಅಡಗಿದ್ದನೆ ದೊಡ್ಡ ಕೊಡದೊಳಗೆ
ಹುಡುಗ ಸಿಕ್ಕಿದನೆಂದು ಹೊಡೆಯ ಹೋದರೆ
ಬಡವರ ಮಗನೇನೆ ಹೊಡೆಯಲಿಕ್ಕೆ ||1||

ಅಳಿಯನ ವೇಷದಿ ಮಗಳ ಕರೆಯ ಬಂದ
ಕಲಹ ಮಾಡಿ ತಾ ಕಳಿಸೆಂದ
ಒಲುಮೆಯಿಂದಲಿ ತಿಂಗಲೆರಡಿಟ್ಟುಕೊಂಡರೆ
ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ ||2||

ಇಷ್ಟೊಂದು ಸಿಟ್ಟೇಕೆ ಚಿಣ್ಣ ಕೃಷ್ಣನ ಮೇಲೆ
ಪುಟ್ಟಿಸಬೇಡಿರೆ ಅನ್ಯಾಯವ
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ್ನ
ದೃಷ್ಟಿಸಿ ನೋಡಿರೆ ತೊಟ್ಟಿಲಿನೊಳಗೆ ||3||
Ena pelale gopi ninna magana jala
Mana tappi banda maneyolage ||pa||

Koda halu kudidane gadigeya odedane
Adagiddane dodda kodadolage
Huduga sikkidanendu hodeya hodare
Badavara maganene hodeyalikke ||1||

Aliyana veshadi magala kareya banda
Kalaha madi ta kalisemda
Olumeyindali timgaleradittukondare
Giliyantha hennina kedisidane gopi ||2||

Ishtondu sitteke cinna krushnana mele
Puttisabedire anyayava
Srushtigodeya namma purandaravithalanna
Drushtisi nodire tottilinolage ||3||

2 thoughts on “Ena pelale gopi ninna magana

Leave a comment