dasara padagalu · MADHWA · purandara dasaru

Kallusakkare kolliro nivellaru

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು
ಕಲ್ಲುಸಕ್ಕರೆ ಕೊಳ್ಳಿರೋ||pa||

ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀಕೃಷ್ಣನಾಮವೆಂಬ||a.pa||

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳು ತುಂಬುವದಲ್ಲ
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ||1||

ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ಡರು ಬೆಲೆ ರೊಕ್ಕವಿದಕಿಲ್ಲ
ಕಟ್ಟಿರುವೆಯು ತಿಂದು ಕಡಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ದವಾಗಿರುವಂಥ||2||

ಸಂತೆ ಸಂತೆಗೆ ಹೋಗಿ ಶ್ರಮಪಡುವುದಲ್ಲ
ಸಂತೆಯೊಳಗೆ ಇಟ್ಟು ಮಾರುವುದಲ್ಲ
ಸಂತತ ಭಕ್ತರ ನಾಲಗೆ ಸವಿಗೊಂಬ
ಕಾಂತ ಪುರಂದರವಿಠಲ ನಾಮವೆಂಬ||3||
Kallusakkare kolliro nivellaru
Kallusakkare kolliro||pa||

Kallusakkare savi ballavare ballaru
Pullalocana srikrushnanamavemba||a.pa||

Ettu herugalinda hottu maruvudalla
Ottotti goniyolu tumbuvadalla
Etta hodaru badige sunkavidakilla
Uttama sarakidu ati laba baruvantha||1||

Nashta biluvudalla nata huttuvudalla
Eshtu oydaru bele rokkavidakilla
Kattiruveyu tindu kadameyaguvudalla
Pattanadolage prasiddavagiruvantha||2||

Sante santege hogi sramapaduvudalla
Santeyolage ittu maruvudalla
Santata Baktara nalage savigomba
Kanta purandaravithala namavemba||3||

One thought on “Kallusakkare kolliro nivellaru

Leave a comment