dasara padagalu · MADHWA · mahabharatham · purandara dasaru

Mahabharata

ಬಗೆಬಗೆ ಆಟಗಳೆಲ್ಲಿ ಕಲಿತೆಯೊ |ಜಗದ ಮೋಹಕನೆ

ಪಖಗವರ ಗಮನನೆ ಅಗಣಿತ ಮಹಿಮನೆ |ಜಗದೊಳು ನೀ ಬಹು ಮಿಗಿಲಾಗಿ |ಪರಿ||ಅ.ಪ||

ಒಬ್ಬಳ ಬಸಿರಿಂದಲಿ ಬಂದು-ಮ-|ತ್ತೊಬ್ಬಳ ಕೈಯಿಂದಲಿ ಬೆಳೆದು ||
ಕೊಬ್ಬಿದ ಭೂಭಾರವನಿಳುಹಲು ಇಂಥ |ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ ||1|||

ಮಗುವಾಗಿ ಪೂತಣಿ ಮೊಲೆಯ-ಉಂಡು |ನಗುತಲವಳ ಅಸುವನೆ ಕೊಂಡು |
ಅಘಹರ ನೀ ಗೋಪಿಯೊಳು ಜನಿಸಿ ಇಂಥ |ಸೊಗಸಿನ ಆಟಗಳೆಲ್ಲಿ ಕಲಿತೆಯೊ ||2||

ಲೋಕರಂತೆ ನೀ ಮಣ್ಣನು ತಿನಲು |ತಾ ಕೋಪಿಸಿ ಜನನಿಯು ಬೇಗ ||
ಓಕರಿಸೆನ್ನಲು ಬಾಯೊಳು ಸಕಲ |ಲೋಕವ ತೋರಿದುದೆಲ್ಲಿ ಕಲಿತೆಯೊ ||3||

ಮಡುವ ಧುಮುಕಿ ಕಾಳಿಂಗನ ಪಿಡಿದು |ಪಡೆಯ ಮೇಲೆ ಕುಣಿದಾಡುತಿರೆ ||
ಮಡದಿಯರು ನಿನ್ನ ಬಿಡದೆ ಬೇಡಲು |ಕಡುದಯೆದೋರಿದುದೆಲ್ಲಿ ಕಲಿತೆಯೊ ||4||

ಒಂದುಪಾದಭೂಮಿಯಲಿ ವ್ಯಾಪಿಸಿ ಮ-|ತ್ತೊಂದುಪಾದಗಗನಕ್ಕಿಡಲು ||
ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |ಬಂಧಿಸಿದಾಟಗಳೆಲ್ಲಿ ಕಲಿತೆಯೊ ||5||

ಭರದಿ ಭಸ್ಮಾಸುರ ವರವನು ಪಡೆದು |ಹರನು ಶಿರದಿ ಕರವಿಡ ಬರಲು ||
ತರುಣಿರೂಪವ ತಾಳಿ ಉರಿಹಸ್ತದವನ |ಮರುಳುಗೊಳಿಸಿದುದನೆಲ್ಲಿ ಕಲಿತೆಯೊ ||6||

ಜಗಕೆ ಮೂಲನೆಂದು ನಾಗರಾಜ ಕರೆಯೆ |ಖಗವಾಹನನಾಗದೆ ನೀ ಬಂದು ||
ನಗುತ ನಗುತ ಆ ವಿಗಡನಕ್ರನ ಕೊಂದ |ಹಗರಣದಾಟಗಳೆಲ್ಲಿ ಕಲಿತೆಯೊ ||7||

ವೇದಗಳರಸಿಯು ಕಾಣದ ಬ್ರಹ್ಮ ನೀ-|ನಾದರದಲಿ ವಿದುರನ ಗೃಹದಿ ||
ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ ||8||

ಡಂಬಕಹಿರಣ್ಯಕಶಿಪು ಪ್ರಹ್ಲಾದನ |ಹಂಬಲವಿಲ್ಲದೆ ಶಿಕ್ಷಿಸಲು ||
ಸ್ತಂಭದಿ ಭಕ್ತಗೆ ರೂಪವ ತೋರಿ |ಸಂಭ್ರಮವಿತ್ತುದನೆಲ್ಲಿ ಕಲಿತೆಯೊ ||9||

ಚಕ್ರಧರನೆ ಜರಾತನಯನೊಂದಿಗೆ ಕಾದಿ |ಸಿಕ್ಕಿ ಓಡಿದವನಿವನೆಂದೆನಿಸಿ ||
ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |ಠಕ್ಕಿನಾಟಗಳನೆಲ್ಲಿ ಕಲಿತೆಯೊ ||10||

ಆ ಶಿರವಾತನ ತಂದೆಯ ಕರದೊಳು |ಸೂಸುತ ರಕ್ತವ ಬೀಳುತಿರೆ ||
ಸೋಸಿ ನೋಡದೆ ರುಂಡ ಬಿಸುಡಲವನ ಶಿರ |ಸಾಸಿರ ಮಾಡಿದುದೆಲ್ಲಿ ಕಲಿತೆಯೊ ||11||

ಪ್ರಾಣ ಸೆಳೆವನೀ ದಿನವೆಂದರ್ಜುನ |ಧೇನಿಸದಲೆ ಸೈಂಧವಗೆನಲು ||
ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ ||12||

ಸರ್ಪನ ಬಾಣವು ಉರಿಯುತ ಬರಲು ಕಂ-|ದರ್ಪನ ಪಿತ ನೀ ಕರುಣದಲಿ ||
ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |ತೋರ್ಪಡಿಸಿದಾಟವೆಲ್ಲಿ ಕಲಿತೆಯೊ ||13||

ದುರುಳದುಃಶಾಸನ ದ್ರೌಪದಿ ಸೀರೆಯ |ಕರದಿಂದ ಸಭೆಯೊಳು ಸೆಳೆಯುತಿರೆ ||
ಹರಿಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ ||14||

ಕುರುಪತಿ ಸಭೆಯೊಳು ಗುರುವಿನಿಂದಿರುತ |ಸಿರಿಕೃಷ್ಣನು ಬರೆ ವಂದಿಸದೆ ||
ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ ||15||

ದುರಿಯೋಧನ ಪಾಂಡವರ ಶಿಕ್ಷಿಸಲು |ಮೊರೆಯಿಡಲವನ ಮರುಳುಗೊಳಿಸಿ ||
ಧುರದೊಳುಪಾರ್ಥಗೆ ಸಾರಥಿಯಾಗಿ ನೀ |ಕುರುಕುಲವಳಿದುದನೆಲ್ಲಿ ಕಲಿತೆಯೊ ||16||

ಪತಿಶಾಪದಿ ಶಿಲೆಯಾದ ಅಹಲ್ಯೆಯ |ಹಿತದಿಂದವಳನು ಉದ್ಧರಿಸಿ ||
ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ ||17||

ಅಂಬರೀಷ ದ್ವಾದಶಿ ವ್ರತ ಸಾಧಿಸೆ |ಡೊಂಬೆತನದಿದೂರ್ವಾಸಬರೆ ||
ಇಂದುಧರಾಂಶನು ರಾಜನ ಪೀಡಿಸ-|ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ ||18||

ಕುಲಛಲಗಳನಳಿದ ಅಜಮಿಳ ಸರಸದಿ |ಹೊಲತಿಯ ಕೂಡಿರೆ ಮರಣ ಬರೆ ||
ಬಲು ಮೋಹದ ಸುತ ನಾರಗನೊದರಲು |ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ ||19||

ಬಡತನ ಪಾರ್ವನ ಬಿಡದೆ ಬಾಧಿಸಲು |ಮಡದಿಯ ನುಡಿಕೇಳಿಆಕ್ಷಣದಿ ||
ಒಡೆಯ ನೀನವನೊಪ್ಪಿಡಿಯವಲನು ಕೊಂಡು |ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ ||20||

ಎಂದೆಂದು ನಿನ್ನ ಗುಣವೃಂದಗಳೆಣಿಸಲು |ಇಂದಿರೆಬೊಮ್ಮನಿಗಸದಳವು ||
ಮಂದರಧರಸಿರೆಪುರಂದರವಿಠಲನೆ |ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ ||22||

Bagebage atagalelli kaliteyo |jagada mohakane ||pa||

Pakagavara gamanane aganita mahimane |jagadolu ni bahu migilagi |pari||a.pa||

Obbala basirindali bandu-ma-|ttobbala kaiyindali beledu ||
Kobbida bubaravaniluhalu intha |tabbibbatagalelli kaliteyo ||1|||

Maguvagi putani moleya-undu |nagutalavala asuvane kondu |
Agahara ni gopiyolu janisi intha |sogasina atagalelli kaliteyo ||2||

Lokarante ni mannanu tinalu |ta kopisi jananiyu bega ||
Okarisennalu bayolu sakala |lokava toridudelli kaliteyo ||3||

Maduva dhumuki kalingana pididu |padeya mele kunidadutire ||
Madadiyaru ninna bidade bedalu |kadudayedoridudelli kaliteyo ||4||

Ondupadabumiyali vyapisi ma-|ttondupadagaganakkidalu ||
Andadi baliya Siradi muraneyadittu |bandhisidatagalelli kaliteyo ||5||

Baradi basmasura varavanu padedu |haranu Siradi karavida baralu ||
Tarunirupava tali urihastadavana |marulugolisidudanelli kaliteyo ||6||

Jagake mulanemdu nagaraja kareye |kagavahananagade ni bandu ||
Naguta naguta A vigadanakrana konda |hagaranadatagalelli kaliteyo ||7||

Vedagalarasiyu kanada brahma ni-|nadaradali vidurana gruhadi ||
Modadi okkuditeya palane kondu |hadiyol harisidudelli kaliteyo ||8||

Dambakahiranyakasipu prahladana |hambalavillade sikshisalu ||
Stambadi Baktage rupava tori |sambramavittudanelli kaliteyo ||9||

Cakradharane jaratanayanondige kadi |sikki odidavanivanendenisi ||
Bakta bimana kaiyali kollisida |thakkinatagalanelli kaliteyo ||10||

A siravatana tandeya karadolu |susuta raktava bilutire ||
Sosi nodade runda bisudalavana Sira |sasira madidudelli kaliteyo ||11||

Prana selevani dinavendarjuna |dhenisadale saindhavagenalu ||
Kanadante suryage cakravanittu |bana hodisidudanelli kaliteyo ||12||

Sarpana banavu uriyuta baralu kan-|darpana pita ni karunadali ||
Tappisi parthana ratha nelakotti |torpadisidatavelli kaliteyo ||13||

Duruladuhsasana draupadi sireya |karadinda sabeyolu seleyutire ||
Harisri krushna ni poreyenalakshana |arive rupade bandudelli kaliteyo ||14||

Kurupati sabeyolu guruvinindiruta |sirikrushnanu bare vandisade ||
Sthiravagi kulitire charanadi dharemetti |kurupananurulisiddelli kaliteyo ||15||

Duriyodhana pandavara sikshisalu |moreyidalavana marulugolisi ||
Dhuradoluparthage sarathiyagi ni |kurukulavalidudanelli kaliteyo ||16||

Patisapadi sileyada ahalyeya |hitadindavalanu uddharisi ||
Patiyodagudisi pativrateyenisida-a-|mitamahimeya krutiyelli kaliteyo ||17||

Ambarisha dvadasi vrata sadhise |dombetanadidurvasabare ||
Indudharamsanu rajana pidisa-|landu cakradi kaydudelli kaliteyo ||18||

Kulacalagalanalida ajamila sarasadi |holatiya kudire marana bare ||
Balu mohada suta naraganodaralu |olidu gatiyanittudelli kaliteyo ||19||

Badatana parvana bidade badhisalu |madadiya nudikeli^^akshanadi ||
Odeya ninavanoppidiyavalanu kondu |kadubagyanittudanelli kaliteyo ||20||

Endemdu ninna gunavrundagalenisalu |indirebommanigasadalavu ||
Mandaradharasire purandaravithalane |chenda-chendadatagalelli kaliteyo ||22||

2 thoughts on “Mahabharata

Leave a comment