dasara padagalu · MADHWA · saraswathy · Vijaya dasaru

Saradeye karunavaridhiye

ಶಾರದೆಯೇ ಕರುಣಾವಾರಿಧಿಯೇ ||pa||

ಸಾರಾಂಶ ವಚನಕೊಟ್ಟು ಸಲಹು ಎನ್ನನು ತಾಯೆ ||a.pa||

ಚಂದ್ರ ಕಿರಣ ಪೋಲ್ವಳೆ ಜಗದಂಬೆ ನಾನು ನಿನ್ನ
ಕಂದ ಎನ್ನಮತಿಗೆ ಸಾಕಾರವಾಗಿರು ಎಂಬೆ ||1||

ಸರಸೀರುಹದಳ ನೇತ್ರೆ ಸಾಮಜಕ್ಕೆ ಸಮಯಾತ್ರೆ
ಪರಮಪಾವನ ಚರಿತ್ರೆ ನೀ ಗತಿ ಜಗಕೆ ಮಿತ್ರೆ ||2||

ಅಜನ ಪಟ್ಟದ ರಾಣಿ ಅಬುಜ ಪಲ್ಲವ ಪಾಣಿ
ವಿಜಯವಿಠ್ಠಲನ ಸೊಸೆ ಮುದ್ದುವಾಣಿಯೆ ||3||

Saradeye karunavaridhiye ||pa||

Saramsa vacanakottu salahu ennanu taye ||a.pa||

Candra kirana polvale jagadambe nanu ninna
Kanda ennamatige sakaravagiru embe ||1||

Sarasiruhadala netre samajakke samayatre
Paramapavana caritre ni gati jagake mitre ||2||

Ajana pattada rani abuja pallava pani
Vijayaviththalana sose mudduvaniye ||3||

2 thoughts on “Saradeye karunavaridhiye

Leave a comment