ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ ||pa||
ಅಕ್ರೂರಗೊಲಿದ ತ್ರಿವಿಕ್ರಮಗೆ
ನಕ್ರನ ಗೆಲಿದ ಪರಾಕ್ರಮಿಗೆ
ಶಕ್ರನ ಗರ್ವಪಹಾರವ ಮಾಡಿದ
ಶುಕ್ರನ ಶಿಷ್ಯನ ಗೆಲಿದವಗೆ ||1||
ಗಂಗೆಯ ಪಡೆದ ಶ್ರೀರಂಗನಿಗೆ
ರಂಗುಮಾಣಿಕದುಂಗುರದವಗೆ
ಭೃಂಗಕುಂತಳೆಯರ ವ್ರತವನೆ ಕೆಡಿಸಿದ
ಅಂಗಜನಯ್ಯ ಶುಭಾಂಗನಿಗೆ ||2||
ಧರೆಯೊಳಧಿಕ ವೆಂಕಟಾಚಲಗೆ
ಸ್ಥಿರವಾಗಿ ಪುಷ್ಕರಿಣಿಲಿ ನೆಲಸಿಹಗೆ
ಪರತತ್ವ ಶ್ರೀಪುರಂದರವಿಠಲಗೆ
ವರವೆಂಕಟೇಶ ಶ್ರೀನಿವಾಸಗೆ ||3||
mangalaM jayamangalaM mangalaM SuBamangalaM ||pa||
akrUragolida trivikramagemangalaM jayamangalaM
nakrana gelida parAkramige
Sakrana garvapahArava mADida
Sukrana SiShyana gelidavage ||1||
gangeya paDeda SrIranganige
rangumANikadunguradavage
BRungakuntaLeyara vratavane keDisida
angajanayya SuBAnganige ||2||
dhareyoLadhika venkaTAcalage
sthiravAgi puShkariNili nelasihage
paratatva SrIpurandaraviThalage
varavenkaTESa SrInivAsage ||3||
3 thoughts on “mangalaM jayamangalaM(akrUragolida trivikramage)”