dasara padagalu · MADHWA · Mahalakshmi · prasanna venkata dasaru

Nalidhu validhu baa gowri

ನಲಿದು ವಲಿದು ಬಾ ಗೌರಿ ||ಪ||

ಶ್ರೀ ಲಕುಮಿ ನರಹರಿ ಮನೋಹರಿ ||ಅಪ ||

ಬಾಲಕ ತನದಲಿ ಗೊಲ್ಲತೆಯರೊಡನೆ
ಲೀಲೆಯ ತೋರಿದ ಚೆಲ್ವಗೋಪಾಲಗೆ
ಮಾಲೆಹಾಕಿ ಮಾಲೋಲೆ ಎನಿಸಿದ
ಲೀಲೆ ಶರಧಿ ಕಾಲ್ಹಾಕು ನಮ್ಮನೆಗೆ ||೧||

ಮುಕುತಾಮುಕುತರಿಗಾಗತೆನಿತ್ಯ
ಮಕುತೆತತ್ವಕಭಿಮಾನಿದೇವತೆ
ವಾಕುಮನ್ನಿಸಿ ನೀಕರುಣದಿಪದ
ಹಾಕು ನಮ್ಮನೆಗೆ ಭಕುತಾಗ್ರೇಸಳೆ ||೨||

ಘಿಲುಘಿಲುಗೆಜ್ಜೆಯನಾದ ತುಂಬಿಸಿ
ಥಳಕುಬಳಕುತ್ವಯ್ಯಾರದ ನಡಿಗಿಲಿ
ಪುಲ್ಲನಾಭಪ್ರಸನ್ವೆಂಕಟರಾಯನ
ಬಲ್ಲಿದಭಕುತಾಗತೆಕೊಲ್ಹಾಪುಎಗತೆ ||೩||
nalidu validu bA gauri ||pa||

SrI lakumi narahari manOhari ||apa ||

bAlaka tanadali gollateyaroDane
lIleya tOrida celvagOpAlage
mAlehAki mAlOle enisida
lIle Saradhi kAlhAku nammanege ||1||

mukutAmukutarigAgatenitya
makutetatvakaBimAnidEvate
vAkumannisi nIkaruNadipada
hAku nammanege BakutAgrEsaLe ||2||

GiluGilugejjeyanAda tuMbisi
thaLakubaLakutvayyArada naDigili
pullanABaprasanvenkaTarAyana
ballidaBakutAgatekolhApu^^egate ||3||

2 thoughts on “Nalidhu validhu baa gowri

Leave a comment