dasara padagalu · MADHWA · Shobane · Vijaya dasaru

shobana shobanavennire(Vijaya dasaru)

ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ
ಶೋಭಾನವೆನ್ನಿ ಶುಭವೆನ್ನಿ ||pa||

ಮಂಗಳದೇವಿಯ ರಮಣ ಬಾ | ಶೃಂಗಾರದ ಗುಣನಿಧಿಯೆ ಬಾ |
ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ ||
ಭವಭವ ಭಂಗಾ ಬಾ | ದೇವೋತ್ತುಂಗಾ ಬಾ |
ಜಗದಂತರಂಗಾ ಬಾ ಹಸೆಯ ಜಗುಲಿಗೆ||1||

ಸಂಕುರುಷಣ ಅನಿರುದ್ಧಾ ಬಾ |
ಪಂಕಜ ಸಂಭವನಯ್ಯ ಬಾ |
ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ ||
ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ |
ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ ||2||

ಹೇಮಾಂಬರಧರ ಹರಿಯೇ ಬಾ | ಸಾಮಜರಾಜಾ ವರದಾ ಬಾ |
ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ ||
ಸುರಸಾರ್ವಭೌಮಾ ಬಾ ದೈತ್ಯವಿರಾಮಾ ಬಾ |
ರಣರಂಗಭೀಮಾ ಬಾ ಹಸೆಯಾ ಜಗುಲಿಗೆ ||3||

ಅನಂತ ಅವತಾರ ಅಚ್ಯುತ ಬಾ |
ಉನ್ನತ ಮಹಿಮನೆ ಯಾದವ ಬಾ |
ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ |
ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ ||4||

ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ |
ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ ||
ಯದುಕುಲ ದೀಪಾ ಬಾ ನಿತ್ಯ ಸಲ್ಲಾಪಾ ಬಾ
ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ ||5||

ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ |
ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ ||
ಗೋಪಿಕಂದಾ ಬಾ | ಬಹುಬಲ ವೃಂದಾ ಬಾ |
ಅತಿಜವದಿಂದಾ ಬಾ ಹಸೆಯಾ ಜಗುಲಿಗೆ ||6||

ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ |
ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ ||
ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ |
ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ||7||

ಉದಯ ಪ್ರಭಾಕರ ಭಾಸಾ ಬಾ | ತ್ರಿದಶಗುಣನುತ ವಿಲಾಸಾ ಬಾ |
ಪದುಮನಾಭ ಮಾಧವ ಶ್ರೀಧರನೆ ಸುನಾಸಾ ಬಾ ||
ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ |
ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ||8||

ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ |
ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ ||
ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ |
ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ ||9||

ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ |
ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ ||
ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ |
ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ||10||

SOBAna | SOBAnavennire suraraMganiyarella
SOBAnavenni SuBavenni ||pa||

mangaLadEviya ramaNa bA | SRungArada guNanidhiye bA |
angajajanaka aravindadALAkShane raMgA bA ||
BavaBava BangA bA | dEvOttuMgA bA |
jagadantarangA bA haseya jagulige ||1||

sankuruShaNa aniruddhA bA | pankaja saMBavanayya bA |
kuMkumAnkitane Bakuta kumuda mRugAnka bA ||
niShkaLankA bA SanKacakrAnka bA |
ahipariyanka À bA haseya jagulige ||2||

hEmAMbaradhara hariyE bA | sAmajarAjA varadA bA |
sAmavilOlane sadguNa SIlane rAmA bA ||
surasArvaBaumA bA daityavirAmA bA |
raNarangaBImA bA haseyA jagulige ||3||

ananta avatAra acyuta bA |
unnata mahimane yAdava bA |
Ganna mUrutiye suprasannA bA saccaritA bA |
BAgya saMpannA bA jIvara BinnA bA haseyA jagulige ||4||

nArAyaNa daSarUpA bA | cArucaritA pratApa bA |
Sauri murAriye niTila kastUriya lEpA bA ||
yadukula dIpA bA nitya sallApA bA
namma samIpa bA haseyA jagulige ||5||

vAsudEva mukundA bA | sAsiranAma gOvindA bA |
kESava puruShOttama narasiMha upEndra bA ||
gOpikandA bA | bahubala vRundA bA |
atijavadindA bA haseyA jagulige ||6||

paratatvadi ati cintA bA | parabommane ati SAntA bA |
paramAtmane paripUrNa viBUtivantA bA ||
aKiLa vEdAntA bA | rukmiNikAntA bA |
sadguNavantA bA haseyA jagulige ||7||

udaya praBAkara BAsA bA | tridaSaguNanuta vilAsA bA |
padumanABa mAdhava SrIdharane sunAsA bA ||
sirimandahAsA bA | Bakuta ullAsA bA |
SrI SrInivAsA bA haseyA jagulige ||8||

kRuShNavENiya paDedavane bA | ratha hoDedavane bA |
kRuShNeya kaShTava naShTa mADida kRuShNA bA ||
yadukula SrEShTha bA | satata saMtuShTa bA |
uDupiya kRuShNa bA haseyA jagulige ||9||

ellaroLage vyApakane bA ballida doregaLa arasane bA |
nA elli nODalu pratigANe ninage sirinallA bA ||
apratimalla bA BaktavatsalA bA |
vijayaviThThala bA haseya jagulige ||10||

3 thoughts on “shobana shobanavennire(Vijaya dasaru)

Leave a comment