dasara padagalu · MADHWA · vedavyasa

Vedavyasara divya padava padumayugala

ವೇದವ್ಯಾಸರ ದಿವ್ಯಪಾದ ಪದುಮಯುಗಲ
ಆರಾಧಿಸುತಿರು ಮನುಜಾ ||pa||

ವೇದಗಳಿಗೆ ಸಮ್ಮತವಾದ ಪುರಾಣಗಳ
ಸಾದರದಲಿ ರಚಿಸಿ ಮೋದವ ಬೀರಿದ ||a.pa||

ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದು
ಸುರಮುನಿ ಪ್ರಾರ್ಥನದಿ
ಪರಮ ಮಂಗಲ ವೀರವರ ಭಾಗವತ ಗ್ರಂಥ
ವಿರಚಿಸಿ ಶುಕಮುನಿಗೆ ಕರುಣದಿಂದರುಹಿದ ||1||

ವಾಸಿಪ ಮುನಿಗುಣ ಭೂಷಿತ ಬದರಿಯೋಳ್
ತೋಷ ತೀರ್ಥರ ಕರೆದು
ಭೂಸುರ ಜನರಿಗೆ ಮೋಕ್ಷದಾಯಕ ಸೂತ್ರ
ಭಾಷ್ಯವರಚಿಸೆಂದಾದೇಶವ ನೀಡಿದ||2||

ಅರಿದರಾದ್ಯಯುಧ ಧರಿಸಿ ಷೋಡಶಸಂಖ್ಯ
ಕರಗಳಿಂದಲಿ ಶೋಭಿತ
ಶರಣು ಜನಕೆ ಸುರತರು ವೆನಿಸಿ ಧರೆಯೊಳು
ಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ ||3||

vEdavyAsara divyapAda padumayugala
ArAdhisutiru manujA ||pa||

vEdagaLige sammatavAda purANagaLa
sAdaradali racisi mOdava bIrida ||a.pa||

dhariyoLu sujanarige varadharma tiLisendu
suramuni prArthanadi
parama mangala vIravara BAgavata grantha
viracisi Sukamunige karuNadindaruhida ||1||

vAsipa muniguNa BUShita badariyOL
tOSha tIrthara karedu
BUsura janarige mOkShadAyaka sUtra
BAShyavaracisendAdESava nIDida||2||

aridarAdyayudha dharisi ShODaSasanKya
karagaLindali SOBita
SaraNu janake surataru venisi dhareyoLu
mereva kArpara narahari rUpAtmakanAda ||3||

One thought on “Vedavyasara divya padava padumayugala

Leave a comment