dasara padagalu · MADHWA · srinivasa · srinivasa kalyana

Shri venkatesha kalyana / ಶ್ರೀವೆಂಕಟೇಶ ಕಲ್ಯಾಣ

ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ ||pa||

ಪನ್ನಂಗಶಯನ ಪ್ರಸನ್ನರ ಪಾಲಿಪ
ಘನ್ನಮಹಿಮ ನೀನೆನ್ನನುದ್ಧರಿಸೂ||a.pa||

ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದ
ಪರಮಾದರದಿಂದಿರುವ ಸಮಯದಿ
ನಾರದ ಮುನಿ ಬಂದೊದಗಿ ನಿಂದ ಇ-
ದಾರಿಗರ್ಪಿತವೆಂದರುಹಿ ಮರಳೀ ತೆರಳಿದ
ಸುರಮುನಿವಚನದಿ ಭೃಗುಮುನಿವರ ಪೋಗಿ
ಹರವಿರಂಚಿಯರ ನೋಡಿದಾ ಉರುತರಕೋಪದಿ ನಿಲ್ಲುತ
ಪರಮಪುರುಷರಲ್ಲೆಂದೆನ್ನುತ ವೈಕುಂಠವನ್ನೇ ಸಾರುತ
ಹರುಷದಿ ಶ್ರೀಹರಿ ಉರಗಶಯನನಾಗಿ
ಪರಮಯೋಗನಿದ್ರೆ ಮಾಡುತಾ ಅರಿಯದಂತೆ ತಾ ನಟಿಸುತ
ಇರೆ ಮುನಿ ಪದದಿಂದೊದೆಯುತ ತ್ವರಿತದಿಂದ ತಾನೇಳುತ
ಹರುಷದಿ ಮುನಿಪಾದ ಕರದಲಿ ಒತ್ತುತ
ಕರುಣದಿ ಸಲಹಿದೆ ದುರಿತವ ಹರಿಸಿ
ಹರಿಭಕುತರ ಅಘಹರಿಸಿಕಾಯುವಂಥ
ಕರುಣಿಗಳುಂಟೇ ಶ್ರೀಹರಿ ಸರ್ವೋತ್ತುಮ ||1||

ಸ್ವಾಮಿ ನೀನಿಜಧಾಮವನೇ ತೊರೆದೂ
ಸ್ವಾಮಿಕಾಸಾರ ತೀರದಿ ನಿಂದೂ ಧಾಮವನರಸಿ
ವಲ್ಮೀಕವನೆ ನೋಡಿ
ವಿಮಲಸ್ಥಳವಿದೆಂದು ಮನದಲಿ ಆನಂದದಿಂದಲಿ ಬಂದು ನಿಂದೆ
ಸನ್ಮುದವನ್ನೇ ತೋರುತ
ಕಮಲ ಭವಶಿವ ತುರುಕರುರೂಪದಿ
ಈ ಮಹಗಿರಿಯನ್ನು ಅರಸುತ ಸ್ವಾಮಿ ನೀನಿಲ್ಲಹೆನೆಂದೆನ್ನುತ
ಕಾಮಧೇನು ಪಾಲ್ಗರೆಯುತಾ ಈ ಮಹಿಮೆಯನ್ನೇ ಬೀರುತಾ
ಭೂಮಿಗೊಡೆಯ ಚೋಳನೃಪಸೇವಕನು
ಧೇನುವನ್ನು ತಾ ಹೊಡೆಯಲು ಕಾಮನಯ್ಯ ನೀನೇಳಲು
ಭೀಮವಿಕ್ರಮವ ತೋರಲು ಕ್ಷಮಿಸಿದೆ ನೃಪನ ದಯಾಳು
ಅಮಿತ ಸುಗುಣಪೂರ್ಣ ಅಜರಾಮರಣ
ನೀ ಮಸ್ತಕಸ್ಪೋಟನ ವ್ಯಾಜವ ತೋರಿ
ಪ್ರೇಮದಿ ಗುರುಪೇಳ್ದೌಷಧಕಾಗಿ
ನೀ ಮೋಹವ ತೋರಿದೆ ವಿಡಂಬನಮೂರ್ತೇ||2||

ಮಾಯಾರಮಣನೆ ಜೀಯಾ ಕಾಯುವೆ ಜೀವನಿಕಾಯಾ
ತೋಯಜಾಂಬಕ ಹಯವನೇರಿ ಭರದಿ ತಿರುಗಿತಿರುಗೀ
ವನವನೆÀಲ್ಲ ಮೃಗನೆವನದಿ ನಿಂದು ನೋಡಿದೇ
ಪ್ರಿಯಸಖಿಯರ ಕೂಡಿ ಪದುಮಾವತಿಯು ತಾ
ಹಯದಿ ಕುಳಿತ ನಿನ್ನ ನೋಡಲು
ಪ್ರಿಯಳಿವಳೆನಗೆಂದು ಯೋಚಿಸಿ
ಕಾಯಜಪಿತ ನಿನ್ನ ಹಯವನೆ ಕಳಕೊಂಡು
ಮಾಯದಿಂದ ನೀ ಮಲಗಿದೆ
ತಾಯಿ ಬಕುಳೆಯೊಳು ಪೇಳಿದೆ
ತೋಯಜಮುಖಿಯಳ ಬೇಡಿದೇ
ಆ ಯುವತಿಯನ್ನೇ ಸ್ಮರಿಸುತಾ
ಶ್ರೀಯರಸನೆ ನೀನು ಸ್ತ್ರೀರೂಪದಿ ಹೋಗಿ
ಶ್ರೀಯಾಗಿಹಳಿನ್ನು ಶ್ರೀಹರಿಗೀಯಲು
ಶ್ರೇಯವೆಂದು ಆಕಾಶನನೊಪ್ಪಿಸಿ
ತಾಯಿಯಭೀಷ್ಟವನಿತ್ತೆ ಸ್ವರಮಣಾ ||3||

ಸಕಲಲೋಕೈಕನಾಥಾ ಭಕುತರಭೀಷ್ಟಪ್ರದಾತಾ
ಭಕುತನಾದ ಆಕಾಶನೃಪತಿಯು ಬಕುಳೆ ಮಾ-
ತ ಕೇಳಿ ಅಭಯವಿತ್ತು ಮನ್ನಿಸಿ ಪದುಮಾವತಿಯ ಪರಿಣಯ
ಶುಕರ ಸನ್ಮುಖಹಲ್ಲಿ ಅಕಳಂಕ ಮಹಿಮ-
ಗೆ ಕೊಟ್ಟನು ತಾ ಲಗ್ನಪತ್ರಿಕಾ
ಸ್ವೀಕರಿಸುವದೀ ಕನ್ನಿಕಾ ಈ ಕಾರ್ಯಕೆ ನೀವೆ ಪ್ರೇ
ರಕಾ ತಾ ಕಳುಹಿದ ಪುಣ್ಯಶ್ಲೋಕನು
ಶೋಕರಹಿತ ಜಗದೇಕವಂದ್ಯ ಅವಲೋಕಿಸಿ ಪತ್ರಿಕವನ್ನು
ಸಕಲಸಾಧನವಿಲ್ಲಿನ್ನು
ಲೋಕೇಶಗರುಹಬೇಕಿನ್ನು
ಏಕಾಂಗಿ ನಾನು ಎನ್ನಲು
ಲೋಕಪತಿಯೆ ಸುರಕೋಟಿಗಳಿಂದಲಿ
ಈ ಕುವಲಯದಿ ನಿನ್ನಯ ಪರಿಣಯವೆಸಗಲು
ಲೋಕಜನಕೆ ಕಲ್ಯಾಣವ ತೋರಿದೆ
ಭಕುತಜನಪ್ರಿಯ ಶ್ರೀವತ್ಸಾಂಕಿತ ||4||

ಖಗವರವಾಹನ ದೇವಾ
ತ್ರಿಗುಣರಹಿತ ಜಗಕಾವ
ಅಗಣಿತಮಹಿಮ ಗೋಮಯನೆನಿಸಿ
ಬಗೆಬಗೆ ರೂಪವ ಧರಿಸಿ ಪರಮಾದರದಲಿ
ಸುರರ ಪೊರೆಯುತಾ
ನಗಧÀರ ನೀನೀ ಗಿರಿಯೊಳು ನೆಲೆಸಿಹೆ
ಅಗಣಿತ ಸುರಗಣ ಕಿನ್ನರರು ಸಾಧ್ಯರು ತರು ಫಲ
ಖಗಮೃಗ ರೂಪವ ಬಗೆಬಗೆ ಇಹೆ
ಪೊಗಳಲಳವೇ ಗಿರಿವರವು
ಹಗಲು ಇರುಳು ಭಗವಂತನೆ ನಿನ್ನನ್ನು
ಪೊಗಳುತಿಹರು ನಿನ್ನ ಭಕುತರು
ನಿಗಮವ ಪಠಿಸುತ ನಡೆವರು ನಗೆ
ಮೊಗದಲಿ ನಿನ್ನ ದಾಸರು ಗೋವಿಂದ ಮುಕುಂದ ಎನ್ನುತಾ
ಯುಗ ಯುಗದೊಳು ನೀನಗದೊಳು ನೆಲಸಿಹೆ
ಜಗದ ದೇವ ರಾಜಿಸುವವನಾಗಿಹೆ
ಮಿಗಿಲೆನಿಸಿದ ಶ್ರೀ ವೆಂಕಟೇಶಾ
ಸದ್ಗುಣ ಸಚ್ಚಿದಾನಂದ ಮುಕುಂದ ಗೋವಿಂದಾ ||5||
innendigO ninnadaruSana SEShAdrivAsa ||pa||

pannangaSayana prasannara pAlipa
Gannamahima nInennanuddharisU||a.pa||

vara suramunigaLa vRunda nerahida yAgagaLinda
paramAdaradindiruva samayadi
nArada muni bandodagi ninda i-
dArigarpitaveMdaruhi maraLI teraLida
suramunivacanadi BRugumunivara pOgi
haraviranciyara nODidA urutarakOpadi nilluta
paramapuruSharalleMdennuta vaikunThavannE sAruta
haruShadi SrIhari uragaSayananAgi
paramayOganidre mADutA ariyadante tA naTisuta
ire muni padadindodeyuta tvaritadinda tAnELuta
haruShadi munipAda karadali ottuta
karuNadi salahide duritava harisi
hariBakutara aGaharisikAyuvantha
karuNigaLunTE SrIhari sarvOttuma ||1||

svAmi nInijadhAmavanE toredU
svAmikAsAra tIradi nindU dhAmavanarasi
valmIkavane nODi
vimalasthaLavidendu manadali Anandadindali bandu ninde
sanmudavannE tOruta
kamala BavaSiva turukarurUpadi
I mahagiriyannu arasuta svAmi nInillahenendennuta
kAmadhEnu pAlgareyutA I mahimeyannE bIrutA
BUmigoDeya cOLanRupasEvakanu
dhEnuvannu tA hoDeyalu kAmanayya nInELalu
BImavikramava tOralu kShamiside nRupana dayALu
amita suguNapUrNa ajarAmaraNa
nI mastakaspOTana vyAjava tOri
prEmadi gurupELdauShadhakAgi
nI mOhava tOride viDaMbanamUrtE||2||

mAyAramaNane jIyA kAyuve jIvanikAyA
tOyajAMbaka hayavanEri Baradi tirugitirugI
vanavaneÀlla mRuganevanadi nindu nODidE
priyasaKiyara kUDi padumAvatiyu tA
hayadi kuLita ninna nODalu
priyaLivaLenagendu yOcisi
kAyajapita ninna hayavane kaLakonDu
mAyadinda nI malagide
tAyi bakuLeyoLu pELide
tOyajamuKiyaLa bEDidE
A yuvatiyannE smarisutA
SrIyarasane nInu strIrUpadi hOgi
SrIyAgihaLinnu SrIharigIyalu
SrEyaveMdu AkASananoppisi
tAyiyaBIShTavanitte svaramaNA ||3||

sakalalOkaikanAthA BakutaraBIShTapradAtA
BakutanAda AkASanRupatiyu bakuLe mA-
ta kELi aBayavittu mannisi padumAvatiya pariNaya
Sukara sanmuKahalli akaLanka mahima-
ge koTTanu tA lagnapatrikA
svIkarisuvadI kannikA I kAryake nIve prE
rakA tA kaLuhida puNyaSlOkanu
SOkarahita jagadEkavaMdya avalOkisi patrikavannu
sakalasAdhanavillinnu
lOkESagaruhabEkinnu
EkAngi nAnu ennalu
lOkapatiye surakOTigaLindali
I kuvalayadi ninnaya pariNayavesagalu
lOkajanake kalyANava tOride
Bakutajanapriya SrIvatsAnkita ||4||

KagavaravAhana dEvA
triguNarahita jagakAva
agaNitamahima gOmayanenisi
bagebage rUpava dharisi paramAdaradali
surara poreyutA
nagadhaÀra nInI giriyoLu nelesihe
agaNita suragaNa kinnararu sAdhyaru taru Pala
KagamRuga rUpava bagebage ihe
pogaLalaLavE girivaravu
hagalu iruLu Bagavantane ninnannu
pogaLutiharu ninna Bakutaru
nigamava paThisuta naDevaru nage
mogadali ninna dAsaru gOvinda mukunda ennutA
yuga yugadoLu nInagadoLu nelasihe
jagada dEva rAjisuvavanAgihe
migilenisida SrI venkaTESA
sadguNa saccidAnanda mukunda gOvindA ||5||

2 thoughts on “Shri venkatesha kalyana / ಶ್ರೀವೆಂಕಟೇಶ ಕಲ್ಯಾಣ

Leave a comment