dasara padagalu · MADHWA · sampradaaya haadu · Vadirajaru

Harshina kuttuva haadu/Turmeric grinding ceremony song

ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ
ಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿ
ಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ ||ಪ||

ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ
ವರ ವಾಣಿರಮಣಗೆ ಶರಣೆಂಬೆ ಸುವ್ವಿ
ವರ ವಾಣಿರಮಣಗೆ ಶರಣೆಂದು ಪೇಳಿದ
ಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ ||1||

ಪಕ್ಷಿ ವಾಹನ್ನ ಜಗಕ್ಕೆ ಮೋಹನ್ನ
ರಕ್ಕಸದಾಹನ್ನನಿವ ಸುವ್ವಿ
ರಕ್ಕಸದಾಹನ್ನನಿವ ತನ್ನ ಮರೆ-
ಹೊಕ್ಕರ ಕಾಯ್ವ ಪ್ರಸನ್ನನಿವ ಸುವ್ವಿ ||2||

ಯಶೋದೆಯ ಕಂದ ತನ್ನ ವಿಷವನುಣ್ಣೆಂದ
ಕರ್ಕಶದ ಪೂತನಿಯ ಶಿಶುವಾಗಿ ಸುವ್ವಿ
ಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮ
ಎಸೆವ ಗೋವಿಂದ ಪಾಲಿಸ ಬಂದ ಸುವ್ವಿ ||3||

ಶಕಟಾಸುರನ್ನ ಮೆಟ್ಟಿ ಕೊಂದ ಬಲು
ವಿಕಟ ದೈತ್ಯನ್ನ ಕೊರಲೆತ್ತಿ ಸುವ್ವಿ
ವಿಕಟದೈತ್ಯನ್ನ ಕೊರಲೆತ್ತಿ ಕೊಂದು ಸರ್ಪನ ಮ-
ಸ್ತಕದಮೇಲೆ ನಲಿವುತ ನಿಂದ ಸುವ್ವಿ||4||

ಕರುಗಳ ಕಣ್ಣಿಯ ಬಿಡುವಾಗ ನಾರಿಯರೆಲ್ಲರು
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುವ್ವಿ
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುರಿದು
ಅವರ್ಬರಲು ಬೆಣ್ಣೆಯ ಕೊಂಡೋಡುವ ಸುವ್ವಿ ||5||

ಮತ್ತಿಯ ಮರಗಳ ಕಿತ್ತುವಾಗ ಅಲ್ಲಿ
ಭೃತ್ಯರಿಗೊಲಿದು ವರವಿತ್ತ ಸುವ್ವಿ
ಭೃತ್ಯರಿಗೊಲಿದು ವರವಿತ್ತ ತನ್ನ
ಮಿತ್ರಜನಕಾಗಿ ಗಿರಿಯೆತ್ತಿದನೆ ಸುವ್ವಿ ||6||

ಮಧುರೆಗೆ ಪೋಗಿ ಮಲ್ಲರಸುವ ನೀಗಿ
ಮದಾಂಧ ಮಾವನ್ನ ಮಡುಹಿದ ಸುವ್ವಿ
ಮದಾಂಧ ಮಾವನ್ನ ಮಡುಹಿದ ಶ್ರೀಕೃಷ್ಣ
ಮುದದಿ ತನ್ನವರ ಮುದ್ದಿಸಿದ ಸುವ್ವಿ ||7||

ಅನಂತಾಸನವೆಂದು ಮತ್ತೊಂದು ನಗರ ಕೃಷ್ಣಗೆ
ಘನೋದಕದ ಮೇಲೆ ಮಿಂಚುತಿಪ್ಪುದು ಸುವ್ವಿ
ಘನೋದಕದ ಮೇಲೆ ಮಿಂಚುತಿಪ್ಪುದು ಅಲ್ಲಿ
ಮನೆ ಮನೆಯಲಿ ಮುಕ್ತರ ಸಂದಣಿ ಸುವ್ವಿ||8||

ಇಂತು ಹಯವದನ ನಿಶ್ಚಿಂತ ಜಗತ್ಕಾಂತ
ಸಂತರನು ಸದಾ ಸಲಹುವ ಸುವ್ವಿ
ಸಂತರನು ಸದಾ ಸಲಹುವ ಮಾರಾಂತರ ಕೃ-
ತಾಂತನ ಬಳಿಗೆ ಕಳುಹುವ ಸುವ್ವಿ ||9||
Suvvi suvvi nam’ma śrīramaṇage suvvi
suvvi suvvi nam’ma bhūramaṇage suvvi
suvvi endu pāḍi sajjanarella kēḷi ||pa||

harige śaraṇembe sirige śaraṇembe
vara vāṇiramaṇage śaraṇembe suvvi
vara vāṇiramaṇage śaraṇendu pēḷida
guruvādirājēndrana kr̥tiyendu suvvi ||1||

pakṣi vāhanna jagakke mōhanna
rakkasadāhannaniva suvvi
rakkasadāhannaniva tanna mare-
hokkara kāyva prasannaniva suvvi ||2||

yaśōdeya kanda tanna viṣavanuṇṇenda
karkaśada pūtaniya śiśuvāgi suvvi
karkaśada pūtaniya śiśuvāgi konda nam’ma
eseva gōvinda pālisa banda suvvi ||3||

śakaṭāsuranna meṭṭi konda balu
vikaṭa daityanna koraletti suvvi
vikaṭadaityanna koraletti kondu sarpana ma-
stakadamēle nalivuta ninda suvvi||4||

karugaḷa kaṇṇiya biḍuvāga nāriyarellaru
poravaḍalu tā pokku pālmosarane suvvi
poravaḍalu tā pokku pālmosarane suridu
avarbaralu beṇṇeya koṇḍōḍuva suvvi ||5||

mattiya maragaḷa kittuvāga alli
bhr̥tyarigolidu varavitta suvvi
bhr̥tyarigolidu varavitta tanna
mitrajanakāgi giriyettidane suvvi ||6||

madhurege pōgi mallarasuva nīgi
madāndha māvanna maḍ’̔uhida suvvi
madāndha māvanna maḍ’̔uhida śrīkr̥ṣṇa
mudadi tannavara muddisida suvvi ||7||

anantāsanavendu mattondu nagara kr̥ṣṇage
ghanōdakada mēle min̄cutippudu suvvi
ghanōdakada mēle min̄cutippudu alli
mane maneyali muktara sandaṇi suvvi||8||

intu hayavadana niścinta jagatkānta
santaranu sadā salahuva suvvi
santaranu sadā salahuva mārāntara kr̥-
tāntana baḷige kaḷuhuva suvvi ||9||

Leave a comment